ಕೊಲ್ಲೂರು ನೂತನ ಶಿಲಾಮಯ ಓಲಗ ಮಂಟಪದ ಲೋಕಾರ್ಪಣೆ

ಶ್ರೀ ಮೂಕಾಂಬಿಕಾ ದೇಗುಲದ ನೂತನ ಶಿಲಾಮಯ ಓಲಗ ಮಂಟಪದ ಲೋಕಾರ್ಪಣೆ ಕಾರ್ಯಕ್ರಮದ ಧಾರ್ಮಿಕ ವಿಧಿ ವಿಧಾನಗಳು ಮಾರ್ಚ್ 1 ಮತ್ತು 2ರಂದು ನಡೆಯಿತು.

ಕೊಲ್ಲೂರು ಶ್ರೀ ಮೂಕಾಂಬಿಕ ದೇಗುಲದ ವ್ಯವಸ್ಥಾಪನ ಸಮಿತಿ ಸದಸ್ಯ ಮಹಾಲಿಂಗ ವಿ ನಾಯಕ್ ಹಾಗೂ ಮಲ್ಲಿಕಾ ಎಂ ನಾಯಕ್ ಅವರ ಸೇವಾರ್ಥವಾಗಿ ನೂತನ ಶಿಲಾಮಯ ಓಲಗಮಂಟಪವನ್ನು ದೇಗುಲದ ಅರ್ಚಕರಾದ ಡಾ.ಕೆ ನರಸಿಂಹ ಅಡಿಗ ಹಾಗೂ ನಿತ್ಯಾನಂದ ಅಡಿಗ ಅವರ ನೇತೃತ್ವದಲ್ಲಿ ವಿಧಿ ವಿಧಾನಗಳೊಂದಿಗೆ ನಡೆಯಿತು

ದೇಗುಲದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಬಾಬು ಶೆಟ್ಟಿ, ಕಾರ್ಯ ನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ ಸದಸ್ಯರಾದ ರಘುರಾಮ್ ದೇವಾಡಿಗ ಆಲೂರು, ಧನಾಕ್ಷಿ, ಸುಧಾ, ರಾಜೇಶ್ ಕಾರಂತ್, ಸುರೇಂದ್ರ ಶೆಟ್ಟಿ ಅಂಕದ ಕಟ್ಟೆ, ಅಭಿಲಾಶ್ ದೇಗುಲದ ಅರ್ಚಕರು ಉಪಾಧಿವಂತರು, ಕ್ಷೇತ್ರ ಪುರೋಹಿತರು, ಸಿಬ್ಬಂದಿ ವರ್ಗ, ಗ್ರಾಮಸ್ಥರು ಭಾಗಿಯಾಗಿದ್ದರು.


ಶೃಂಗೇರಿ ಕ್ಷೇತ್ರದ ಶ್ರೀ ವಿಧು ಶೇಖರ ಭಾರತಿ ಮಹಾಸ್ವಾಮೀಜಿಯವರು ಆಗಮಿಸಿ ಶ್ರೀ ದೇವಿಯ ದರ್ಶನ ಪಡೆದು ಶಿಲಾಮಯ ಓಲಗ ಮಂಟಪದ ಪೂಜೆ ವಿಧಿ ವಿಧಾನಗಳನ್ನು ನಡೆಸಿ ಆಶೀರ್ವಚನವನ್ನು ನೀಡಿದರು.
ಕಾರ್ಯಕ್ರಮದಲ್ಲಿ ಗಣ್ಯರು, ಭಕ್ತಾದಿಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಜನಸ್ತೋಮ ಸೇರಿ ಅದ್ದೂರಿಯಾಗಿ ನೆರವೇರಿತು.
ರಾಜೇಶ್ ಕೆ ಸಿ ಅವರು ಕಾರ್ಯಕ್ರಮ ನಿರೂಪಿಸಿದರು.

URL has been copied successfully!

Discover more from BYNDOOR XPRESS

Subscribe now to keep reading and get access to the full archive.

Continue reading