ಬೈಂದೂರು ತಾಲೂಕು ಕಚೇರಿಯಲ್ಲಿ ಬೈಂದೂರು ಹೋಬಳಿಯ 9 ಗ್ರಾಮಗಳ ಸುಮಾರು 55 ಅರ್ಹ ಬಡ ಫಲಾನುಭವಿಗಳಿಗೆ 94 ಸಿ ಮತ್ತು 94 ಸಿಸಿ ಹಕ್ಕು ಪತ್ರ ಶಾಸಕ ಗುರುರಾಜ್ ಶೆಟ್ಟಿ ಗಂಟೆ ಹೊಳೆಯ ಸಮ್ಮುಖದಲ್ಲಿ ವಿತರಿಸಲಾಯಿತು. ಬೈಂದೂರು ಹೋಬಳಿಯ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಲಾಗಿದೆ.
ಈ ಹಿಂದೆ ನಡೆಸಿದ ಸಂಪರ್ಕ ಸಭೆಯಲ್ಲಿ ಜನರ ಬಳಿ ಅಧಿಕಾರಿಗಳನ್ನು ಕರೆದುಕೊಂಡು ಹೋದ ಪರಿಣಾಮ ಸಣ್ಣ ಪುಟ್ಟ ನ್ಯೂನತೆ ಇರುವ ಕಡಗಳನ್ನು ಸರಿಪಡಿಸಿ ಅರ್ಹರನ್ನು ಹುಡುಕಿ ಭೂಮಿ ಹಕ್ಕು ನೀಡುವ ಕೆಲಸವಾಗಿದೆ. ಈ ಪ್ರಕ್ರಿಯೆ ನಿರಂತರವಾಗಿ ನಡೆಯಲಿದೆ ಎಂದು ಶಾಸಕ ಗುರುರಾಜ್ ಶೆಟ್ಟಿ ಗಂಟೆ ಹೊಳೆ ಹೇಳಿದರು.
ತಹಶೀಲ್ದಾರ್ ರಾಮಚಂದ್ರಪ್ಪ ಕಂದಾಯ ನಿರೀಕ್ಷಕ ಉಪೇಂದ್ರ ಹಾಗೂ ಗ್ರಾಮ ಆಡಳಿತ ಅಧಿಕಾರಿಗಳು ಮತ್ತು ಇತರರು ಉಪಸ್ಥಿತರಿದ್ದರು

