ಜಿಲ್ಲೆಯಲ್ಲಿ ಪ್ರವಾಸಿ ಬೋಟ್ ಸಹಿತ ವಾಟರ್ ಸ್ಪೋರ್ಟ್ಸ್ ಗೆ ಸಂಬಂಧಿಸಿದಂತೆ ಸುಮಾರು 149 ಬೋಟ್ ಮಾಲಕರ ಜೊತೆ ಸಭೆ ನಡೆಸಿ ಸೂಕ್ತ ಸಲಹೆ ಸೂಚನೆ ನೀಡಿ ಸರಿಯಾದ ಸುರಕ್ಷಾ ಕ್ರಮ ಅಳವಡಿಸುವಂತೆ, ಜಲ ಕ್ರೀಡೆ ನಡೆಸುವ ಸಂದರ್ಭ ಪ್ರವಾಸಿಗರಿಗೆ ಲೈಫ್ ಜಾಕೆಟ್, ಪ್ರಥಮ ಚಿಕಿತ್ಸಾ ಕಿಟ್, ಹಾಗೆ ಇನ್ನಿತರ ಸುರಕ್ಷಾ ಸಾಧನಗಳನ್ನು ಇಟ್ಟುಕೊಳ್ಳುವಂತೆ ಮತ್ತು ಅದನ್ನು ಸರಿಯಾಗಿ ಪಾಲಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.
ಈ ನಿಯಮಾವಳಿಯನ್ನು ಮೀರಿ ಜಿಲ್ಲೆಯಲ್ಲಿ ಜಲ ಕ್ರೀಡೆ ನಡೆಸುವುದು ಕಂಡು ಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

