ಮೊಗೇರಿ ಜಾನುವಾರುಗಳಿಗಾಗಿ ದಾಸ್ತಾನು ಮಾಡಿದ ಬೈಹುಲ್ಲಿಗೆ ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಆಕಸ್ಮಿಕ ಬೆಂಕಿ ತಗುಲಿ ಅಪಾರ ಪ್ರಮಾಣದ ಬೈ ಹುಲ್ಲು ಸುಟ್ಟು ಭಸ್ಮವಾಗಿದ್ದು, ಅಂದಾಜು ಸುಮಾರು 1.5 ಲಕ್ಷ ರೂ ನಷ್ಟವುಂಟಾಗಿದೆ. ಬೈಂದೂರು ಅಗ್ನಿಶಾಮಕ ದಳದವರ ಹಾಗೂ ಸ್ಥಳೀಯರ ಸೂಕ್ತ ಕಾರ್ಯಾಚರಣೆಯಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದ್ದು, ಮನೆಗೆ ಬೆಂಕಿ ತಗುಲಿ ಸಂಭವಿಸಬಹುದಾದಂತಹ ಹೆಚ್ಚಿನ ಅನಾಹುತ ತಪ್ಪಿದೆ.
ಸ್ಥಳೀಯರ ಸಹಕಾರದಿಂದ ಹಸುಗಳು ಪ್ರಾಣಾಪಾಯದಿಂದ ಪಾರು.




