ಇತಿಹಾಸ ಪ್ರಸಿದ್ಧ ಪುತ್ತೂರು ಜೋಡುಕೆರೆ ಕೋಟಿ-ಚೆನ್ನಯ್ಯ ಕಂಬಳದಲ್ಲಿ ಕನೆಹಲಗೆ ವಿಭಾಗದಲ್ಲಿ ಬೈಂದೂರು ಸಸಿಹಿತ್ಲು ವೆಂಕಟ ಪೂಜಾರಿಯವರ ಕೋಣಗಳು ಆರೂವರೆ ಕೋಲು ನಿಶಾನೆಗೆ ನೀರನ್ನು ಹಾಯಿಸಿ ಕನೆ ಹಲಗೆ ವಿಭಾಗದಲ್ಲಿ ಚಿನ್ನದ ಬಹುಮಾನವನ್ನು ಪಡೆದುಕೊಂಡಿದ್ದಾರೆ.ಕೋಣವನ್ನು ಓಡಿಸಿದವರು ಬೈಂದೂರು ಹೊಸ್ಕೋಟೆ ಮಹೇಶ್ ಪೂಜಾರಿ, ಹಲವು ದಶಕಗಳಿಂದ ಕಂಬಳ ಕ್ಷೇತ್ರದಲ್ಲಿ ಹಲವಾರು ಬಹುಮಾನ ಪಡೆದಿದ್ದು ,ಇತ್ತೀಚಿಗೆ ಬೈಂದೂರು ಸೂರ್ಯ ಚಂದ್ರ ಕಂಬಳದಲ್ಲಿ ಸಾಂಪ್ರದಾಯಿಕ ಕಂಬಳದಲ್ಲಿ ಹಗ್ಗ ಹಿರಿಯ ವಿಭಾಗದಲ್ಲಿ ಚಾಂಪಿಯನ್ನ ಪಟ್ಟವನ್ನು ಅಲಂಕರಿಸಿದ್ದರು,ಕಂಬಳ ಕ್ಷೇತ್ರದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಧನೆ ಮಾಡಿದ್ದಾರೆ


