ಮಿಯ್ಯಾರು ಕಂಬಳ ಸಮಿತಿ ಮತ್ತು ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಸಹಯೋಗದೊಂದಿಗೆ ನಡೆದ 22ನೇ ವರ್ಷದ ಮಿಯ್ಯಾರು ಲವ-ಕುಶ ಜೋಡುಕರೆ ಬಯಲು ಕಂಬಳ ಜ. 3ರ ಬೆಳಗ್ಗೆ ಪ್ರಾರಂಭಗೊಂಡು ಜ.4ರ ರಾತ್ರಿ 8 ಗಂಟೆಗೆ ಸಮಾಪ್ತಿಗೊಂಡಿತು. ಕಂಬಳ ಕೂಟದಲ್ಲಿ ಒಟ್ಟು 205 ಜತೆ ಕೋಣಗಳು ಭಾಗವಹಿಸಿದವು.
ಈ ಕಂಬಳದಲ್ಲಿ ಬೈಂದೂರು ವಿಶ್ವನಾಥ ದೇವಾಡಿಗ ವಿಶೇಷ ಸಾಧನೆಗೈದಿದ್ದಾರೆ ಕಂಬಳ ಕೂಟದ ನೇಗಿಲು ಹಿರಿಯ,ನೇಗಿಲು ಕಿರಿಯ, ಹಗ್ಗ ಹಿರಿಯ ವಿಭಾಗದ ವಿಜೇತ 3 ಕೋಣಗಳನ್ನು ಓಡಿಸಿ ಹ್ಯಾಟ್ರಿಕ್ ಸಾಧನೆಗೈದಿರುತ್ತಾರೆ.
ಫಲಿತಾಂಶ
ಹಗ್ಗ ಹಿರಿಯಪ್ರಥಮ - ಮುಡಾರು ಹಚ್ಚಿಟ್ಟು ಪ್ಲೋರ ನಿವಾಸ ರೋಹನ್ ರಂಜಿತ್ ಫೆರ್ನಾಂಡಿಸ್ (ಓಡಿಸಿದವರು : ಬೈಂದೂರು ವಿಶ್ವನಾಥ ದೇವಾಡಿಗ)ದ್ವಿತೀಯ - ಮಿಜಾರು ಪ್ರಸಾದ ನಿಲಯ ಶಕ್ತಿ ಪ್ರಸಾದ್ ಶೆಟ್ಟಿ (ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ)
ಹಗ್ಗ ಕಿರಿಯಪ್ರಥಮ – ಹೊಸ್ಮಾರು ಸೂರ್ಯ ಶ್ರೀ ಜ್ಯೋತಿ ಸುರೇಶ್ ಶೆಟ್ಟಿ (ಓಡಿಸಿದವರು: ಕಡಂದಲೆ ಮೂಡಾಯಿಬೆಟ್ಟು ಮೋಹಿತ್ ಪಾಣಾರ)ದ್ವಿತೀಯ - ಮಿಯ್ಯಾರು ಹಿಣಪ್ಪಾಡಿ ಬ್ರಿಜೇಶ್ ಪಡಿವಾಳ್ ಎ (ಓಡಿಸಿದವರು : ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ)
ಅಡ್ಡ ಹಲಗೆಪ್ರಥಮ - ನಾರಾವಿ ರಕ್ಷಿತ್ ಜೈನ್ (ಓಡಿಸಿದವರು : ಭಟ್ಕಳ ಹರೀಶ್)
ದ್ವಿತೀಯ - ಕೋಂಟಡ್ಕ ರೆಂಜಾಳ ಆಶ್ವಿನ್ ಲಾರೆನ್ಸ್ ಮೆಂಡೊನ್ಸಾ (ಓಡಿಸಿದವರು : ಉಳ್ಳೂರು ಕಂದಾವರ ಗಣೇಶ್)
ನೇಗಿಲು ಹಿರಿಯಪ್ರಥಮ - ಬೋಳದಗುತ್ತು ಸತೀಶ್ ಶೆಟ್ಟಿ ಎ. (ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ)
ದ್ವಿತೀಯ - ನೂಜಿಪ್ಪಾಡಿ ಚಂದ್ರಶೇಖರ ಹೊಳ್ಳ ಎ. (ಓಡಿಸಿದವರು : ಕಕ್ಕೆಪದವು ಕೃತಿಕ್ ಗೌಡ)
ನೇಗಿಲು ಕಿರಿಯಪ್ರಥಮ - ಕಾರ್ಕಳ ಬಂಡಿಮಠ ಸಿದ್ಧಿವಿನಾಯಕಬೆಟ್ಟು ಕೋಡಿಮನೆ ಅದ್ವಿಕ್ ಅಶೋಕ್ ಶೆಟ್ಟಿ ಎ (ಓಡಿಸಿದವರು : ಬೈಂದೂರು ವಿಶ್ವನಾಥ ದೇವಾಡಿಗ)
ದ್ವಿತೀಯ - ಶ್ರೀ ಶಂಕರ್ ಮೂಡುಸೂರ ಈಶ್ವರಕಟ್ಟೆ ಪ್ರೇರಣಾ ಪ್ರತಾಪ್ ಭಂಡಾರಿ (ಓಡಿಸಿದವರು : ಮಂದಾರ್ತಿ ಶಿರೂರು ಮುದ್ದುಮನೆ ಗೋಪಾಲ ನಾಯ್ಕ್)

