ವಿದ್ಯಾರ್ಥಿಗಳು ಜೀವನದಲ್ಲಿ ಆತ್ಮ ಗೌರವಕ್ಕೆ ಬೆಲೆ ನೀಡಿ : ಉಪನ್ಯಾಸಕ ಚಿದಾನಂದ ಭಂಡಾರಿ

ಬೈಂದೂರು : ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲೆ ವಿಭಾಗದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಬುಧವಾರ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕುಮಟಾ ಸರಸ್ವತಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಚಿದಾನಂದ ಭಂಡಾರಿ ಅವರು ಪ್ರತಿಭಾ ಪುರಸ್ಕಾರ ಉದ್ಘಾಟಿಸಿ, ಮಾತನಾಡಿ, ಸಾಧನೆಯ ಹಾದಿ ಸುಗಮವಲ್ಲ. ಛಲವಿದ್ದವರು ಮಾತ್ರ ಆ ಹಾದಿಯಲ್ಲಿ ಸಾಗಲು ಸಾಧ್ಯ. ನಮ್ಮ ಕ್ರಿಯೆಗಳಿಗೆ ಪೂರಕವಾಗಿ ಪ್ರತಿಕ್ರಿಯೆ ಇರುತ್ತದೆ. ಹಾಗೇ ವಿದ್ಯಾರ್ಥಿಗಳ ಜೀವನದಲ್ಲಿ ಜೀವನದಲ್ಲಿ ಆತ್ಮ ಗೌರವಕ್ಕೆ ಬೆಲೆ ನೀಡಿ ಎಂದರು.
ಬೈಂದೂರು ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲೆ ವಿಭಾಗದ ಎಸ್.ಡಿ. ಎಮ್. ಸಿ ಅಧ್ಯಕ್ಷ ಉಮೇಶ್ ಬಿ. ಪ್ರತಿಭಾ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಬೈಂದೂರು ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲೆ ವಿಭಾಗದ ವಾರ್ಷಿಕ ಸ್ಫೂರ್ತಿ ಹಸ್ತ ಪತ್ರ ಬಿಡುಗಡೆಗೊಳಿಸಿದರು. 2025ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ, ಗೌರವಿಸಲಾಯಿತು.

ಬೈಂದೂರು ಕ್ಷೇತ್ರ ಶಿಕ್ಷಣಧಿಕಾರಿ ನಾಗೇಶ್ ನಾಯ್ಕ್, ಬೈಂದೂರು ಪಟ್ಟಣ ಪಂಚಾಯತ್ ನಾಮನಿರ್ದೇಶಕ ನಾಗೇಶ್ ಡಿ ಪಡುವರಿ, ಬೈಂದೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ವೆಂಕಟರಮಣ ನಾಯ್ಕ್, ಎಸ್.ಡಿ. ಎಮ್. ಸಿ ಉಪಾಧ್ಯಕ್ಷೆ ಅನಿತಾ,  ಸದಸ್ಯರಾದ ಕನಕ, ಸುಧಾಕರ ದೇವಾಡಿಗ, ಗಂಗಾಧರ ಮೊಗವೀರ, ದಯಾನಂದ, ಗೋಪಾಲಕೃಷ್ಣ, ವಿದ್ಯಾರ್ಥಿ ನಾಯಕ ಸ್ವಸ್ತಿಕ್, ವಿದ್ಯಾರ್ಥಿನಿ ನಾಯಕಿ ಅನನ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬೈಂದೂರು ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲೆ ವಿಭಾಗದ ಉಪ ಪ್ರಾಂಶುಪಾಲ ಪದ್ಮನಾಭ. ಪಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ದೈಹಿಕ ಶಿಕ್ಷಕ ಪ್ರಭಾಕರ್ ಕ್ರೀಡಾಕೂಟ ಬಹುಮಾನ ಪಟ್ಟಿ ವಾಚಿಸಿದರು.ಶಿಕ್ಷಕರಾದ ರವೀಂದ್ರ ಪಿ, ದತ್ತಾತ್ರೇಯ ಭಟ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ವೀಣಾ ನಾಯ್ಕ್ ವಂದಿಸಿದರು.

URL has been copied successfully!

Discover more from BYNDOOR XPRESS

Subscribe now to keep reading and get access to the full archive.

Continue reading