ಉಡುಪಿ ಜಿಲ್ಲೆ ಭಾಗದ ಸಾಂಪ್ರದಾಯಕ ಕಂಬಳದಲ್ಲಿ ಒಂದೇ ದಿನ ಏಳು ಬಹುಮಾನಗಳನ್ನು ಪಡೆದು ಸಾಧನೆಗೈದ ಶಂಕರ ದೇವಾಡಿಗ ನಾಗೂರು, ಬೈಂದೂರು ತಾಲೂಕಿನ ನಾಗೂರಿನ ಶಂಕರ ದೇವಾಡಿಗ ಸುಮಾರು ಐದು ವರ್ಷಗಳಿಂದ ಕಂಬಳ ಕ್ಷೇತ್ರದಲ್ಲಿ ಓಟಗಾರನಾಗಿ ಭಾಗವಹಿಸುತ್ತಿದ್ದು ಇತ್ತೀಚೆಗೆ ಸಾಧನೆಯ ಹಾದಿಯಲ್ಲಿ ದಾಪುಗಾಲು ಹಾಕುತ್ತಿದ್ದಾರೆ.
ದಿನಾಂಕ ಡಿಸೆಂಬರ್ 14ರಂದು ನಡೆದ ಎರಡು ಕಂಬಳಗಳಲ್ಲಿ ಹಗ್ಗ ಹಿರಿಯ, ಹಗ್ಗ ಕಿರಿಯ,ಹಗ್ಗ ಅತಿ ಕಿರಿಯ ವಿಭಾಗಗಳಲ್ಲಿ ಒಟ್ಟು ಏಳು ಬಹುಮಾನಗಳನ್ನು ಪಡೆದುಕೊಂಡು ಸಾಂಪ್ರದಾಯಿಕ ಕಂಬಳದಲ್ಲಿ ಸಾರ್ವಕಾಲಿಕ ದಾಖಲೆಯನ್ನು ಸೃಷ್ಟಿಸಿದ್ದು ಕಂಬಳ ಅಭಿಮಾನಿಗಳ ಜನಮನ ಗೆದ್ದಿದ್ದಾರೆ

