ಬೈಂದೂರು : ದೇವಾಡಿಗರ ಸಂಘ (ರಿ.) ಉಪ್ಪುಂದ ಇದರ ದಶಮಾನೋತ್ಸವದ ಪ್ರಯುಕ್ತ ಕ್ರೀಡಾಕೂಟ ಭಾನುವಾರ ಬಿಜೂರು ಸ.ಹಿ.ಪ್ರಾ ಶಾಲೆ ಆವರಣ, ಜಿಲ್ಲಾ ಕ್ರೀಡಾoಗಣದಲ್ಲಿ ನಡೆಯಿತು.
ಬೆಂಗಳೂರು ದೇವಾಡಿಗ ಸಂಘದ ಅಧ್ಯಕ್ಷ ರಮೇಶ್ ದೇವಾಡಿಗ ವಂಡ್ಸೆ ಅವರು ಉದ್ಘಾಟಿಸಿ, ಮಾತನಾಡಿ, ಸಂಘಟಿತ ಕ್ರೀಡೆ ಸಮಾಜದಲ್ಲಿ ಆರೋಗ್ಯ, ಸಹಕಾರ ಮತ್ತು ಸೌಹಾರ್ದತೆಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ದೇವಾಡಿಗರ ಸಂಘ (ರಿ.) ಉಪ್ಪುಂದ ಇದರ ಅಧ್ಯಕ್ಷ ಎಚ್. ರವೀಂದ್ರ ದೇವಾಡಿಗ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಉಪ್ಪುಂದ ಹೋಟೆಲ್ ಉದ್ಯಮಿ ನಂದೀಶ್ ದೇವಾಡಿಗ, ಹೆಮ್ಮಾಡಿ ಜನತಾ ಶಿಕ್ಷಣ ಸಂಯೋಜಕ ಯೋಗೀಶ್ ದೇವಾಡಿಗ, ಬಿಜೂರಿನ ಮಠದಮನೆ ಕೃಷ್ಣಮೂರ್ತಿ ದೇವಾಡಿಗ, ನಾಗೂರು ಉದ್ಯಮಿ ಈಶ್ವರ ದೇವಾಡಿಗ, ದುರ್ಗಾ ಫ್ರೆಂಡ್ಸ್ ಉಪ್ಪುಂದ ಅಧ್ಯಕ್ಷ ಕೇಶವ ದೇವಾಡಿಗ ಉಪಸ್ಥಿತರಿದ್ದರು.
ದೇವರಾಯ ದೇವಾಡಿಗ ಸ್ವಾಗತಿಸಿದರು. ನರಸಿಂಹ ದೇವಾಡಿಗ ಕಾರ್ಯಕ್ರಮ ನಿರ್ವಹಿಸಿದರು. ಪುರುಷೋತ್ತಮ್ ದಾಸ್ ಉಪ್ಪುಂದ ವಂದಿಸಿದರು.

