ರೆಸಾರ್ಟ್ ಮಾಡಲು ಹಣ ಹೂಡಿಕೆ ಮಾಡುವಂತೆ ಪುಸಲಾಯಿಸಿ ವಂಚನೆ

ಬೈಂದೂರು: ರೆಸಾರ್ಟ್ ಮಾಡಲು ಹಣ ಹೂಡಿಕೆ ಮಾಡುವಂತೆ ಪುಸಲಾಯಿಸಿ ವಂಚಿಸಿದ ಬಗ್ಗೆ ಕೇರಳದ ಶ್ರೀಜಿತ್ ಎಂ ಟಿ ಬೈಂದೂರು ಠಾಣೆಗೆ ದೂರು ನೀಡಿದ್ದಾರೆ. ಟ್ರಾನ್ಸ್ಪೋರ್ಟ್ ಕೆಲಸ ಮಾಡಿಕೊಂಡಿದ್ದು ಪರಿಚಯದ ಸ್ವರೂಪ್ ಕೃಷ್ಣನ್ ಕರ್ನಾಟಕದ ಉಡುಪಿ ಕರಾವಳಿ ಪ್ರದೇಶದಲ್ಲಿ ರೆಸಾರ್ಟ್ ಮಾಡಲು ಸಾಕಷ್ಟು ಜಾಗಗಳಿವೆ. ಹಣ ಹೂಡಿಕೆ ಮಾಡಿದರೆ ಲಾಭ ಪಡೆಯಬಹುದೆಂದು ಪುಸಲಾಯಿಸಿದ ಹಿನ್ನೆಲೆಯಲ್ಲಿ ಸ್ನೇಹಿತರಾದ ಮನೂಫ್ ಮತ್ತು ಪ್ರಣವ್ ಅವರನ್ನು ಸಹ ಪಾರ್ಟ್ನರ್ ಆಗಿ ಮಾಡಿಕೊಂಡು ಕಾರ್ಯಕ್ಕೆ ಇಳಿದಿದ್ದು, ಈ ನಡುವೆ ಬೆಂಗಳೂರಿನಲ್ಲಿ ನೌಫಲ್ ಎಂಬುವವರನ್ನು ಬೈಂದೂರಿಗೆ ಕರೆತಂದಿದ್ದು ಅವರು ಬೈಂದೂರಿನ ಸೋಮೇಶ್ವರ ಬೀಚ್ ಪಕ್ಕದಲ್ಲಿ ರೆಸಾರ್ಟ್ ಮಾಡಲು ಯೋಗ್ಯ ಸ್ಥಳ ಗುರುತಿಸಿ ಕೊಡುವವರು ಎಂದು ನಂಬಿಸಿದ್ದರು.
ಸುಜನ್ ಪಾಲ್ ಅಚ್ಯುತನ್ ಮಧ್ಯಸ್ಥಿಕೆಯಲ್ಲಿ ಒಟ್ಟು 90 ಲಕ್ಷ ರೂಪಾಯಿ ವ್ಯವಹಾರ ಕೊಡಲು ಒಪ್ಪಂದವಾಗಿದ್ದು ಮೊದಲ ಕಂತಾಗಿ 30 ಲಕ್ಷ ನಂತರ ಎರಡು ಬಾರಿ 20 ಲಕ್ಷದಂತೆ ನೀಡಲಾಗಿದ್ದು ಈವರೆಗೆ ಜಾಗದ ಗುರುತು ಮಾಡಿಕೊಟ್ಟಿಲ್ಲ. ಸುಳ್ಳು ದಾಖಲೆ ತೋರಿಸಿ ವಂಚನೆ ಮಾಡಿದ್ದಾರೆ ಎಂದು ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

URL has been copied successfully!

Discover more from BYNDOOR XPRESS

Subscribe now to keep reading and get access to the full archive.

Continue reading