ಶ್ರೀ ಭಾಸ್ಕರ್ ದೇವಾಡಿಗ ಇವರು ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಗೆ ಭಾಜನರಾಗಿರುತ್ತಾರೆ.
ಕರ್ನಾಟಕ ಸರ್ಕಾರವು ಕ್ರೀಡಾ ಕ್ಷೇತ್ರದಲ್ಲಿ ಗ್ರಾಮೀಣ ಕ್ರೀಡೆಯಾದ ದೇಶಿ ಕ್ರೀಡೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಗ್ರಾಮೀಣ ಕ್ರೀಡೆಗಳಲ್ಲಿ ಗಣನೀಯ ಸಾಧನೆಗೈದ ಕರ್ನಾಟಕದ ಕ್ರೀಡಾಪಟುಗಳಿಗೆ ರಾಜ್ಯದ ಅತ್ಯುನ್ನತ ಗ್ರಾಮೀಣ ಕ್ರೀಡಾ ಪ್ರಶಸ್ತಿಯಾದ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಯನ್ನು ಸನ್ಮಾನ್ಯ ಮುಖ್ಯಮಂತ್ರಿಗಳು ಪ್ರಧಾನ ಮಾಡಿ ಪುರಸ್ಕರಿಸಲಿದ್ದಾರೆ.
ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಡಿಸೆಂಬರ್ 1 2025 ರಂದು ಸಂಜೆ ಗಂಟೆ 4ಕ್ಕೆ ಯವನಿಕ ಸಭಾಂಗಣ ರಾಜ್ಯ ಯುವ ಕೇಂದ್ರ ನೃಪತುಂಗ ರಸ್ತೆ ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ.

