ಉಡುಪಿಯ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿ

ಉಡುಪಿಯ ಕೃಷ್ಣ ಮಠದ ಆವರಣದಲ್ಲಿ ಗೀತೆಯ ಜ್ಞಾನವನ್ನು ಶ್ರೀಕೃಷ್ಣನಿಗೆ ಅರ್ಪಿಸುವ ಪರಿಕಲ್ಪನೆಯಲ್ಲಿ ಲಕ್ಷ ಕಂಠದಿಂದ ಸಾಮೂಹಿಕ ಗೀತಾ ಪಾರಾಯಣ
ಗೀತಾ ಪಠಣ ಕಾರ್ಯಕ್ರಮಕ್ಕೆ ಆಗಮಿಸಿರುವ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಅವರಿಗೆ ಭಾರತ ಭಾಗ್ಯವಿಧಾತ ಎನ್ನುವ ಬಿರುದನ್ನು ಸನ್ಮಾನ್ಯ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮಿ ಅವರ ಸಮ್ಮುಖದಲ್ಲಿ ನೀಡಲಾಯಿತು.
ಉಡುಪಿಯನ್ನು ಉದ್ದೇಶಿಸಿ ಮಾತನಾಡಿರುವ ಪ್ರಧಾನಿಯವರು ಇಂದು ಗೀತಾ ಪಠಣಕ್ಕಾಗಿ ಸಮಾಜದ ವಿವಿಧ ವರ್ಗಗಳ ಜನರನ್ನು ಒಟ್ಟುಗೂಡಿಸುವ ವಿಶೇಷ ಸಭೆಯಾಗಿದೆ. ಈ ಮಠವು ನಮ್ಮ ಸಾಂಸ್ಕೃತಿಕ ಜೀವನದಲ್ಲಿ ಬಹಳ ವಿಶೇಷ ಮಹತ್ವವನ್ನು ಹೊಂದಿದೆ. ಶ್ರೀ ಮಧ್ವಾಚಾರ್ಯರಿಂದ ಪ್ರೇರಿತರಾಗಿ, ಸಮಾಜ ಸೇವೆ ಮಾಡುವಲ್ಲಿ ಮುಂಚೂಣಿಯಲ್ಲಿದೆ. ನಾವು ಸ್ವಚ್ಛತೆಯ ಯಾವ ಅಭಿಯಾನವನ್ನು ರಾಷ್ಟ್ರೀಯ ರೂಪದಲ್ಲಿ ನೋಡುತ್ತಿದ್ದೇವೆಯೋ ಅದನ್ನು ಉಡುಪಿಯು ಐದು ದಶಕಗಳ ಹಿಂದೆ ಅಳವಡಿಸಿಕೊಂಡಿತ್ತು, ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆ ಹೊಸ ಮಾದರಿಯನ್ನು ನೀಡಬೇಕಿತ್ತು, ಉಡುಪಿಯೇ ಈ ಕಾರ್ಯಕ್ರಮಗಳನ್ನು 70ರ ದಶಕದಲ್ಲಿ ಪ್ರಾರಂಭಿಸಿತ್ತು, ಇಂದು ಈ ಅಭಿಯಾನೋ ದೇಶದ ರಾಷ್ಟ್ರೀಯ ಅಭಿವೃದ್ಧಿಯ ರಾಷ್ಟ್ರೀಯ ಪ್ರಾಥಮಿಕತೆಯ ಭಾಗವೆಂದು ಪರಿಗಣಿಸಿ ನಮಗೆ ಮಾರ್ಗದರ್ಶನ ನೀಡುತ್ತಿದೆ ಎಂದು ಹೇಳಿದರು.

URL has been copied successfully!

Discover more from BYNDOOR XPRESS

Subscribe now to keep reading and get access to the full archive.

Continue reading