ಬೈಂದೂರಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಡೆಂಟಲ್ ಕ್ಲಿನಿಕ್ ಶುಭಾರಂಭ

ಬೈಂದೂರು : ಜೀವನದಲ್ಲಿ ಪರಿಶ್ರಮದ ದುಡಿಮೆ, ಪ್ರಾಮಾಣಿಕತೆಯನ್ನು ಅಳವ ಡಿಸಿಕೊಂಡು ತಮ್ಮ ವೃತ್ತಿಯನ್ನು ತಪಸ್ಸಿನ ರೀತಿಯಲ್ಲಿ ತೊಡಗಿಸಿಕೊಂಡಾಗ ಅದರಲ್ಲಿ ಯಶಸ್ವಿಯಾಗಲು ಸಾಧ್ಯವಾಗುತ್ತದೆ ಎನ್ನು ವುದಕ್ಕೆ ಇಲ್ಲಿನ ದಂತ ವೈದ್ಯ ಡಾ. ಅನಿಲ್ ಶೆಟ್ಟಿ ಉತ್ತಮ ನಿದರ್ಶನ ಎಂದು ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು.

ಇಲ್ಲಿನ ಸೇನೇಶ್ವರ ದೇವಳದ ಬಳಿಯಲ್ಲಿರುವ ಮನೀಷ್ ಪ್ಲಾಜಾದಲ್ಲಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಶುಭಾರಂಭಗೊಂಡ ರವಿರಾಜ್ ಡೆಂಟಲ್ ಕ್ಲಿನಿಕ್‌ನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.

ಕಳೆದ ಎರಡು ದಶಕದ ಹಿಂದೆ ತೀರಾ ಪೈಪೋಟಿಯ ನಡುವೆ ಹುಟ್ಟಿಕೊಂಡ ಬೈಂದೂರಿನ ರವಿರಾಜ್ ಡೆಂಟಲ್ ಕ್ಲಿನಿಕ್ ಇಂದು ಉಡುಪಿ, ಮಂಗಳೂರಿನಂತಹ ನಗರ ಪ್ರದೇಶಗಳ ಮಾದರಿಯಲ್ಲಿ ಅತ್ಯಾ ಧುನಿಕ ತಂತ್ರಜ್ಞಾನದೊಂದಿಗೆ ಪುನರ್ ನಿರ್ಮಾಣ ಮಾಡಿರುವುದು ನಿಜವಾಗಿ ಯೂ ಬಹು ದೊಡ್ಡ ಸಾಧನೆಯಾಗಿದೆ

ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಆಧುನಿಕ ಡೆಂಟಲ್ ಸ್ಕ್ಯಾನಿಂಗ್ ಸೆಂಟರ್ ಉದ್ಘಾಟಿಸಿ ಮಾತನಾಡಿ, ಅಭಿವೃದ್ಧಿ ಯಡೆಗೆ ದಾನುಗಾಲಿಡುತ್ತಿರುವ ಬೈಂದೂರಿಗೆ ಇಂಥದ್ದೊಂದು ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಂಡಿರುವ ಡೆಂಟಲ್ ಸ್ಕ್ಯಾನಿಂಗ್ ಸೆಂಟರ್ ಅಗತ್ಯತೆ ಯಿದ್ದು, ಈ ಭಾಗದ ಜನರ ಭಾವನೆಗಳಿಗೆ ಸ್ಪಂಧಿಸಿ ಸುಸಜ್ಜಿತ ಡೆಂಟಲ್ ಕ್ಲಿನಿಕ್‌ನ್ನು ಆರಂಭಿಸುವ ಮೂಲಕ ಡಾ. ಅನಿಲ್ ಶೆಟ್ಟಿ ಅವರು ಬೈಂದೂರಿಗೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಗ್ರಾಮೀಣ ಭಾಗದ ಜನರು ಇದನ್ನು ಸದುಪಯೋಗಪಡಿಸಿ ಕೊಂಡಾಗ ಸಾರ್ಥಕತೆ ಕಂಡುಕೊಳ್ಳುತ್ತದೆ ಎಂದರು.

ಮಾಜಿ ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯ ಶಿಕ್ಷಕ ಕರುಣಾಕರ ಶೆಟ್ಟಿ ಡಾ. ಎಂ.ಎಸ್. ಶೆಟ್ಟಿ ಜಗನ್ನಾಥ ಶೆಟ್ಟಿ ನಾಕಟ್ಟೆ ವೆಂಕಟರಮಣ ಬಿಜೂರು, ನಿತಿನ್ ಶೆಟ್ಟಿ ಸುಧಾಕರ ಆಚಾರ್ಯ ತ್ರಾಸಿ, ಕಿರಿ ಮಂಜೇಶ್ವರ ಅಗಸ್ತೆಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರದೀಪ್ ಕುಮಾರ ಶೆಟ್ಟಿ ಕೊಲ್ಲೂರು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಬಾಬು ಹೆಗ್ಡೆ, ಬಂಟರಯಾನೆ ನಾಡವರ ಸಂಘ ಬೈಂದೂರು ಅಧ್ಯಕ್ಷ ಜಿ. ಗೋಕುಲ್ ಶೆಟ್ಟಿ ರೈತರ ಸಂಘ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಜಿ.ಪಂ. ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ, ಸೇನೇಶ್ವರ ದೇವಸ್ಥಾನ ಬೈಂದೂರು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಿರೀಶ್ ಬೈಂದೂರು, ಉಪಸ್ಥಿತರಿದ್ದರು.

ಸೇವಾ ಸೌಭ್ಯಗಳು: ಈ ಆಧುನಿಕ ತಂತ್ರಜ್ಞಾನ ಒಳಗೊಂಡಿರುವ ಈ ಡೆಂಟಲ್ ಕ್ಲಿನಕ್‌ನಲ್ಲಿ ಸಿಬಿಸಿಟಿ ಓಪಿಜಿ ಇಮೇಜಿಂಗ್, ಪ್ರಿವೇಂಟಿವ್ ‘ರೆಸ್ಟೋರೇಟಿವ್ ದೆಂಟಿಸ್ಟ್ರಿ, ರೂಟ್ ಕೆನಲ್ ಚಿಕಿತ್ಸೆ, ಕಾಸ್ಟೇಟಿಕ್ ದೆಂಟಿಸ್ಟ್ರಿ, ದಂತ ಕಸಿ, ಸಂಪೂರ್ಣ ಬಾಯಿ ರೆಹಾಬಿಲಿಟೇಷನ್, ದಂತ ಚಿಕಿತ್ಸೆ ಹಾಗೂ ದಂತ ಜೋಡಣೆ, ಓರಲ್’ ಮ್ಯಾಕ್ಸಿಲೋ ಪೇಶಿಯಲ್ ಶಸ್ತ್ರ ಚಿಕಿತ್ಸೆ ಮಕ್ಕಳ ಹಾಗೂ ವಯಸ್ಕರ ದಂತ ಚಿಕಿತ್ಸೆ ಒಸಡು ಚಿಕಿತ್ಸೆ ತುರ್ತು ದಂತದ ಕೇರ್, ಕಾನ್ಸಿಯಸ್ ಸಿಡೇಷನ್ ಹಾಗೂ ಲೇಸರ್ ಸೌಲಭ್ಯ ಸೇರಿದಂತೆ ದಂತಕ್ಕೆ ಸಂಬಂಧಿಸಿದ ಎಲ್ಲಾ ಸೌಲಭ್ಯ ಒಳಗೊಂಡಿದೆ.

ಬೈಂದೂರು ರವಿರಾಜ್ ಡೆಂಟಲ್ ಕ್ಲಿನಿಕ್ ವ್ಯವಸ್ಥಾಪಕಿ ತೃಪ್ತಿ ಅನಿಲ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಅನಿಲ್ ಶೆಟ್ಟಿ ಸ್ವಾಗತಿಸಿದರು, ದಿನೇಶ ಅಚಾರ್ಯ ನಿರೂಪಿಸಿದರು, ಸುಧಾಕರ ಪಿ. ವಂದಿಸಿದರು.

URL has been copied successfully!

Discover more from BYNDOOR XPRESS

Subscribe now to keep reading and get access to the full archive.

Continue reading