ಉಳ್ಳೂರು 11: ಇತಿಹಾಸ ಪ್ರಸಿದ್ಧ ಬೈಂದೂರು ತಾಲೂಕಿನ ಉಳ್ಳೂರು-11 ಕೆರೆಗದ್ದೆ ರಾಮ ಗಾಣಿಗ ಹಾಗೂ ಸಹೋದರರು, ಸಂಬಂಧಿಗಳು ಗ್ರಾಮಸ್ಥರ ಸಹಕಾರದೊಂದಿಗೆ ಆಚರಿಸಿಕೊಂಡು ಬಂದಿರುವ ಇತಿಹಾಸ ಪ್ರಸಿದ್ದ ಕೆರೆಗದ್ದೆ ಕಂಬಳೋತ್ಸವ ಮತ್ತು ಕೆಸರುಗದ್ದೆ ಕ್ರೀಡೋತ್ಸವ ಈ ಬಾರಿ ಹಲವಾರು ವಿಶೇಷತೆಗಳಿಂದ ದಿನಾಂಕ 23-11-2025 ರಂದು ಸಂಭ್ರಮದಿಂದ ಸಂಪನ್ನಗೊಂಡಿತು
ಕಂಬಳ ಅಭಿಮಾನಿ ಬಳಗ ಉಳ್ಳೂರು 11 ಹಾಗೂ ಕೆರೆಗದ್ದೆ ಮನೆಯವರ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೂಡುಮಠ ಗೋಪಾಲ್ ಉಡುಪರ ಶುಭ ಆಶೀರ್ವಾದದೊಂದಿಗೆ,ದೈವ, ದೇವರ ಪೂಜೆ ಕಾರ್ಯಾದಿಗಳು ನೆರವೇರಿದವು. ಮಧ್ಯಾಹ್ನ ಕಂಬಳಕ್ಕೆ ಬರುವ ಕೋಣಗಳನ್ನು ವೀಳ್ಯ, ಮರ್ಯಾದೆ, ಸ್ಮರಣಿಕೆಯೊಂದಿಗೆ ಸ್ವಾಗತಿಸಲಾಯಿತು.

ಮನೆಯ ಕೋಣಗಳಿಗೆ ಬೈಂದೂರು ಕಂಬಳ ಸಮಿತಿಯ ಅಧ್ಯಕ್ಷ ಮಂಜು ಪೂಜಾರಿ ಸಸಿಹಿತ್ಲು ಇವರು ಹಸಿರು ನಿಶಾನೆ ಮೂಲಕ ಚಾಲನೆ ನೀಡಿದರು , ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷರು ,ಕೆರೆಗದ್ದೆ ಕಂಬಳ ಸಮಿತಿಯ ಗೌರವಾಧ್ಯಕ್ಷರಾದ ಎಸ್ ಪ್ರಕಾಶ್ಚಂದ್ರ ಶೆಟ್ಟಿಯವರು ಊರಿನ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಕ್ರೀಡಾ ಪ್ರತಿಭೆಗಳಾದ ರಜತ ಪೂಜಾರಿ ಹೊಕ್ಕೊಳಿಮನೆ ಹಾಗೂ ಕೀರ್ತಿ ಪೂಜಾರಿ ಅಜ್ಜಿಮನೆ ಹಾಗೂ ಬೈಂದೂರು ಕಂಬಳ ಸಮಿತಿಯ ಅಧ್ಯಕ್ಷ ಮಂಜು ಪೂಜಾರಿ ಸಸಿಹಿತ್ಲು, ರಾಜ್ಯ ಕಂಬಳ ಸಮಿತಿಯ ಸದಸ್ಯರಾಗಿ ಆಯ್ಕೆಯಾದ ವಿಕ್ರಮ ಪೂಜಾರಿ ಸಸಿಹಿತ್ಲು ಇವರನ್ನು ಸನ್ಮಾನಿಸಿ ಮಾತನಾಡಿ, ವಿಶೇಷವಾಗಿ ಈ ಬಾರಿ ಕೆರೆಗದ್ದೆಯನ್ನು ವಿದ್ಯುದ್ದೀಪಗಳಿಂದ ಅಲಂಕರಿಸಿದ ಗಣೇಶ ಪೂಜಾರಿ ಹೊಸೊಕ್ಲುಮನೆ ಇವರ ಸೇವೆ ಶ್ಲಾಘನೀಯ ಎಂದರು, ಕೋಣಗಳ ಮಾಲಕರಿಗೆ ,ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು
ಶಾಸಕ ಗುರುರಾಜ್ ಗಂಟಿಹೊಳೆಯವರು ಬೈಂದೂರು ಕಂಬಳ ಸಮಿತಿಯ ವತಿಯಿಂದ ಸಂಪ್ರದಾಯಕಿಯ ಕಂಬಳವನ್ನು ಪ್ರೋತ್ಸಾಹಿಸುವ ಸಲುವಾಗಿ ಕೆರೆಗೆದ್ದೆಮನೆಯವರಾದ ಲಿಂಗ ಗಾಣಿಗ ಇವರನ್ನು ಪ್ರೀತಿಪೂರ್ವಕವಾಗಿ ಗೌರವಿಸಿ ಮಾತನಾಡಿ
ಇಲ್ಲಿ ನೂರಾರು ವರ್ಷಗಳಿಂದ ಕಂಬಳ ನಡೆಯುತ್ತಿದ್ದು, ಮಧ್ಯೆ ಒಮ್ಮೆ ನಿಂತಿದ್ದು, ಆ ಬಳಿಕ ಕೆರೆಗದ್ದೆ ಮನೆತನದವರು, ಉಳ್ಳೂರಿನ ಕಂಬಳ ಅಭಿಮಾನಗಳ ಬಳಗ ಒಟ್ಟಾಗಿ ಈ ಕಂಬಳವನ್ನು ಪ್ರತೀ ವರ್ಷ ಸಂಪ್ರದಾಯಬದ್ಧವಾಗಿ ಆಚರಿಸಿಕೊಂಡು ಬರುತ್ತಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದರು

ಕಿರಿಮಂಜೇಶ್ವರ ಅಗಸ್ತೇಶ್ವರ ಸಮಿತಿಯ ಅಧ್ಯಕ್ಷರಾದಂತಹ ಪ್ರದೀಪ್ ಕುಮಾರ್ ಶೆಟ್ಟಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀನಿವಾಸ್ ಪೂಜಾರಿ ಸದಸ್ಯರಾದ ಸುಳಿಯಣ್ಣ ಶೆಟ್ಟಿ , ಸತೀಶ್ ಕುಮಾರ್ ಶೆಟ್ಟಿ ಹಾಗೂ ಬುಜಂಗಶೆಟ್ಟಿ ಕೂಕನಾಡು , ಶೇಖರ್ ಪೂಜಾರಿ ಗುಡಾಡಿ ಸಮರ ಶೆಟ್ಟಿ ಕೆಳಮನೆ ಬೈಂದೂರು ಕಂಬಳ ಸಮಿತಿಯ ಉಪಾಧ್ಯಕ್ಷರಾದ ಪರಮೇಶ್ವರ್ ಭಟ್, ದಿನೇಶ್ ಆಚಾರ್ಯ ಕಾರ್ಯದರ್ಶಿಯಾದಂತಹ ಸುಧೀರ್ ದೇವಾಡಿಗ ಹಾಗೂ ಕಿಶೋರ್ ಪೂಜಾರಿ ಸಸಿಹಿತ್ಲು, ಸುರೇಶ್ ಪೂಜಾರಿ ಅಂಗಡಿ ಮನೆ ಗಣೇಶ್ ದೇವಾಡಿಗ ಹಾಡಿಮನೆ, ಮುಂತಾದ ಗಣ್ಯರು ಉಪಸ್ಥಿತರಿದ್ದರು
ವೀಕ್ಷಕ ವಿವರಣೆಗಾರರಾಗಿ ಕಿಶೋರ್ ಸಸಿಹಿತ್ಲು,ಗಣೇಶ್ ಕೊಠಾರಿ , ಜೆಪಿ ಬಡಕೆರೆ ,ರಜತ್ ಪೂಜಾರಿ ಸಹಕಾರಿಸಿದರು .ದಿನೇಶ್ ಆಚಾರ್ ಕಾರ್ಯಕ್ರಮ ನಿರೂಪಿಸಿದರು. ರಂಜಿತ್ ಪೂಜಾರಿ ಸ್ವಾಗತಿಸಿದರು, ಅರುಣ್ ಗಾಣಿಗ ವಂದಿಸಿದರು. ಕಂಬಳ ಕೂಟದಲ್ಲಿ ಒಟ್ಟು 52 ಜೊತೆ ಕೋಣಗಳು ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಉಳ್ಳೂರು ಕಂಬಳದ ಮೆರಗು ಇಮ್ಮಡಿಯಾಗಿತ್ತು. ಶಾಲಾ ವಿದ್ಯಾರ್ಥಿಗಳಿಗೆ ಕೆಸರುಗದ್ದೆ ಕ್ರೀಡಾಕೂಟ ಆಯೋಜಿಸಲಾಗಿತ್ತು.


