ಬೈಂದೂರು ಕ್ಷೇತ್ರದ ಭವಿಷ್ಯದ ಹಿತ ದೃಷ್ಟಿಯಿಂದ ಜಾಗತಿಕ ಮಟ್ಟದ ಅಭಿವೃದ್ಧಿ ಒಗ್ಗೂಡಿಸುವುದಕ್ಕಾಗಿ ಹಾಗೂ ಕ್ಷೇತ್ರದ ಪ್ರವಾಸೋದ್ಯಮ ಅವಕಾಶಗಳನ್ನು ಪರಿಚಯಿಸಲು ಹಾಗೂ ಬೈಂದೂರಿನ ಜಾಗತಿಕ ಮಟ್ಟದ ಹೂಡಿಕೆದಾರರನ್ನು ಆಕರ್ಷಿಸುವುದು ಕ್ಷೇತ್ರದ ಸಾಂಸ್ಕೃತಿಕ ವೇದಿಕೆ ಮೂಲಕ ಸಮಗ್ರ ಅಭಿವೃದ್ಧಿ ಪರಿಕಲ್ಪನೆ ಉದ್ದೇಶದಿಂದ ಸಮೃದ್ಧ ಬೈಂದೂರು ಸಹಿತ ವಿವಿಧ ಸಂಘ ಸಂಸ್ಥೆಗಳ ಮತ್ತು ಬೈಂದೂರು ತಾಲೂಕು ಆಡಳಿತ ಸಹಭಾಗಿತ್ವದಲ್ಲಿ ಎರಡನೆಯ ಬಾರಿಗೆ ಬೈಂದೂರು ಉತ್ಸವ ಜನವರಿ 24 25 26 ನೇ ತಾರೀಕಿನಂದು ನಡೆಯುವುದಾಗಿ ಶಾಸಕ ಗುರುರಾಜ ಗಂಟಿಹೊಳೆ ಮಾಹಿತಿ ನೀಡಿದರು.

