
ರೋಟರಿ ಕ್ಲಬ್ ಬೈಂದೂರು, ರೋಟರ್ಯಕ್ಟ್ ಕ್ಲಬ್ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೈಂದೂರು.
ಕರ್ನಾಟಕ ಲೋಕಾಯುಕ್ತ ಉಡುಪಿ ಜಿಲ್ಲೆ ಇವರ ಆಶಯದಲ್ಲಿ ಇಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಬೈಂದೂರಿನಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಜಾಗೃತಿ ಅರಿವು ಕಾರ್ಯಕ್ರಮ ನೆರವೇರಿಸಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿರುವ ಶ್ರೀ ಎಸ್. ರಾಜು ಪೂಜಾರಿ ಅವರು ನೆರವೇರಿಸಿ ಮಾತನಾಡಿ ಮುಂದಿನ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿ ದೆಸೆಯಲ್ಲಿ ಭ್ರಷ್ಟಾಚಾರ ವಿರೋಧಿ ಮನೋಭಾವನೆಯನ್ನು ಮಕ್ಕಳಲ್ಲಿ ಬೆಳೆಸಬೇಕಾಗಿದೆ ಆ ನಿಟ್ಟಿನಲ್ಲಿ ಇಂಥಹ ಕಾರ್ಯಕ್ರಮ ಅರ್ಥಪೂರ್ಣ ಎಂದರು. ಸಂಪನ್ಮೂಲ ವ್ಯಕ್ತಿಯಾಗಿ ರಾಜೇಂದ್ರ ನಾಯಕ್ ಇನ್ಸ್ಪೆಕ್ಟರ್ ಲೋಕಾಯಕ್ತ ಉಡುಪಿ ಇವರು ಭ್ರಷ್ಟಾಚಾರ ನಿರ್ಮೂಲನೆಯ ಜಾಗೃತಿ ಕಾರ್ಯಕ್ರಮದ ಬಗ್ಗೆ ಸುದೀರ್ಘವಾದ ಮಾಹಿತಿ ನೀಡಿ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು. ಸಭಾ ಅಧ್ಯಕ್ಷತೆಯನ್ನು ರೋಟರಿ ಅಸಿಸ್ಟೆಂಟ್ ಗವರ್ನರ್ ಐ.ನಾರಾಯಣ ಅವರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ನಾಗರಾಜ ಶೆಟ್ಟಿ ಪ್ರಾಂಶುಪಾಲರು , ಸರಕಾರಿ ಪ್ರಥಮ ದರ್ಜೆ ಕಾಲೇಜು ಬೈಂದೂರು. ಮಂಗೇಶ್ ಶಾನಭಾಗ್ ವಕೀಲರು, ರೊ ಮಣಿಕಂಠ. ಡಿ ರೊಟರ್ಯಾಕ್ಟ್ ಸಂಯೋಜಕರು, ನಿತ್ಯಶ್ರೀ ಅದ್ಯಕ್ಷರು,ರೋಟರ್ಯಕ್ಟ್ ಕ್ಲಬ್ ಬೈಂದೂರು ಇವರುಗಳು ಉಪಸ್ಥಿತರಿದ್ದರು, ರೋಟರಿ ಕ್ಲಬ್ ಬೈಂದೂರು ಕಾರ್ಯದರ್ಶಿ ರೊ ಪ್ರದೀಪ್ ಶೆಟ್ಟಿ ಕಾರಿಕಟ್ಟೆ ಬೈಂದೂರು, ಸ್ವಾಗತಿಸಿದರು ಹಾಗೂ ರೋಟರ್ಯಕ್ಟ್ ಕ್ಲಬನ ಉಪದ್ಯಕ್ಷೆ ಯಾದ ಶ್ವೇತಾ ಇವರು ಕಾರ್ಯಕ್ರಮವನ್ನು ನಿರ್ವಹಿಸಿದರು.


