ಕಾರು-ಸ್ಕೂಟ‌ರ್ ಅಪಘಾತ ಮಹಿಳೆ ಸಾವು,ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲು

ಕಾರು ಸ್ಕೂಟ‌ರ್ ಅಪಘಾತ ಆಸ್ಪತ್ರೆಗೆ ತೆರಳುವ ದಾರಿ ಮಧ್ಯದಲ್ಲಿ ಮಹಿಳೆ ಸಾವು ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲು

ಬೈಂದೂರು ತಾಲೂಕಿನ ಯಳಜಿತ ಗ್ರಾಮದ ರಾ ಹೆ 766 C ರ ಗೋಳಿಮರ ಕ್ರಾಸ್ ಬಳಿ ದಿನಾಂಕ 02.11.2025 ರಂದು ಮದ್ಯಾಹ್ನ ಚಂದ್ರಶೇಖರ ನಾಯ್ಕ್ ಎಂಬುವವರ ಮಾವನಾದ ರಘುರಾಮ ರವರ KA 20 MD 2030 ನಂಬ್ರನ ಕಿಯಾ ಸಲೂನ್ ಕಾರಿನಲ್ಲಿ ಅವರು ಮತ್ತು ಅವರ ಹೆಂಡತ್ತಿಯಾದ ಮೀನಾ ಮತ್ತು ಮಾಮಿ ಶಾರದ ಹಾಗೂ ಅತ್ತಿಗೆ ರತ್ನ ರೊಂದಿಗೆ ಬ್ರಹ್ಮಾವರದಿಂದ ಗೋಳಿಹೊಳೆಯಲ್ಲಿರುವ ಅವರ ಸಂಭಂದಿಕರ ಮನೆಗೆ ಅವರ ಮಾವ ರಘುರಾಮ ಚಲಾಯುಸುತ್ತಿದ್ದ ಕಾರಿನಲ್ಲಿ ತೆರಳುತ್ತಿರುವಾಗ ಅವರ ಎದುರಿನಿಂದ ಅಂದರೆ ಕೊಲ್ಲೂರು ಕಡೆಯಿಂದ ಬೈಂದೂರು ಕಡೆಗೆ KA 15 EF 5908 ನಂಬ್ರನ ಸುಜುಕಿ ಸ್ಕೂಟ‌ರ್ ಸವಾರ ಸುಭಾನ್‌ ತನ್ನ ಸ್ಕೂಟರ್ ಅನ್ನು ಅತೀ ವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ತೀರ ಬಲ ಬದಿಗೆ ಚಲಾಯಿಸಿ ಇವರ ಕಾರಿಗೆ ಎದುರಿನಿಂದ ಗುದ್ದಿದ ಪರಿಣಾಮ ಸ್ಕೂಟ‌ರ್ ಸವಾರ ಮತ್ತು ಸಹಸವಾರ ಇಬ್ಬರು ರಸ್ತೆಗೆ ಬಿದ್ದಿದ್ದು ಕಾರಿನವರು ಇಳಿದು ನೋಡಲಾಗಿ ಬೈಕ್ ಸವಾರ ಹೆಲ್ ಮೇಟ್ ಧರಿಸಿದ್ದು ಆತನ ಕಾಲು ಮತ್ತು ಭುಜಕ್ಕೆ ಪೆಟ್ಟಾಗಿದ್ದು ಹಾಗೂ ಸಹ ಸವಾರಳಿಗೆ ರಸ್ತೆಗೆ ಬಿದ್ದ ಪರಿಣಾಮ ತಲೆಗೆ ಮತ್ತು ಕಾಲಿಗೆ ತೀವ್ರ ಪೆಟ್ಟಾಗಿರುತ್ತದೆ. ಕಾರಿನಲ್ಲಿದ್ದವರು ಕೂಡಲೇ ಇಳಿದು ಗಾಯಗೊಂಡ ಇರ್ವರನ್ನು ಉಪಚರಿಸಿ 108 ಅಂಬುಲೆನ್ಸ್ ನಲ್ಲಿ ಅವರಿಬ್ಬರನ್ನು ಕುಂದಾಪುರ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುವುದಾಗಿದ್ದು ನಂತರ ಗಾಯಗೊಂಡ ತಸ್ಬೀಯಾ ಬೇಗಂ ಕುಂದಾಪುರ ಆಸ್ಪತ್ರೆಗೆ ಸಾಗಿಸುವ ದಾರಿ ಮದ್ಯದಲ್ಲಿ ಮೃತಪಟ್ಟಿರುವುದಾಗಿದೆ.

URL has been copied successfully!

Discover more from BYNDOOR XPRESS

Subscribe now to keep reading and get access to the full archive.

Continue reading