ಬೈಂದೂರು: ಗೋಳಿಹೊಳೆ ಶ್ರೀ ವಿನಾಯಕ ಆಟೋರಿಕ್ಷಾ ಗೂಡ್ಸ್ ಟೆಂಪೋ ಮತ್ತು ಟ್ಯಾಕ್ಸಿ ಚಾಲಕ ಮತ್ತು ಮಾಲಕರ ಸಂಘ(ರಿ)ಗೊಳಿಹೊಳೆ ಇದರ 70ನೇ ವರ್ಷದ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಇತ್ತೀಚಿಗೆ ದೈವಾಧೀನರಾದ ಸಂಘದ ಸದಸ್ಯರಾದ ಪುಟ್ಟಯ್ಯ ಮರಾಠಿ ಹಾಗೂ ರಾಜು ನಾಯ್ಕ ಅವರ ಆತ್ಮಕ್ಕೆ ಸದ್ಗತಿ ದೊರೆಯಲೆಂದು ಮೌನಚರಣೆ ನಡೆಸಲಾಯಿತು,ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ಪ್ರೋತ್ಸಾಹ ಧನ ನೀಡಿ ಅಭಿವಂದಿಸಲಾಯಿತು.
ಬಿವಿಎಸ್ಎಸ್ಎನ್ ಗೊಳಿಹೊಳೆ ಶಾಖೆ ಮ್ಯಾನೇಜರ್ ಶಿವರಾಮ್ ಹುದಾರ್ ದೇವಿ ಭುವನೇಶ್ವರಿ ರಥದ ಉದ್ಘಾಟನೆ ಮಾಡಿದರು, ಧ್ವಜಾರೋಹಣವನ್ನು ಸಂಘದ ಹಿರಿಯ ಸದಸ್ಯರಾದ ರತ್ನಾಕರ ಶೆಟ್ಟಿ ಅವರು ನೆರವೇರಿಸಿದರು.
ಶ್ರೀ ರಾಘವೇಂದ್ರ ಪೂಜಾರಿ ಮ್ಯಾನೇಜರ್ ಶ್ರೀ ರಾಮ ಸೌಹಾರ್ದ ಗೋಳಿಹೊಳೆ ಇವರು ಭುವನೇಶ್ವರಿ ರಥಕ್ಕೆ ದೀಪ ಬೆಳಗಿಸಿ, ಶ್ರೀ ಪಾರ್ಶ್ವನಾಥ ಜೈನ್ ಮೇಲ್ವಿಚಾರಕರು ಧ.ಗ್ರಾ. ಯೋಜನೆ ಗೋಳಿಹೊಳೆ ವಲಯ ಇವರು ಶ್ರೀ ಭುವನೇಶ್ವರಿ ರಥಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಂಜು ಪೂಜಾರಿ ಸಸಿಹಿತ್ಲು ಮಾತನಾಡಿ ಸಂಘಟನೆಯಿಂದ ಬಲ ವೃದ್ಧಿಯಾಗುತ್ತದೆ ಹಾಗೂ ನಮ್ಮ ಸದಸ್ಯರ ಉತ್ಸಹವೇ ನಮ್ಮ ಸಂಘದ ಶಕ್ತಿ ಎಂದರು.

ಈ ಸಂದರ್ಭದಲ್ಲಿ ಕಾರ್ಯಧ್ಯಕ್ಷರಾದ ನಾರಾಯಣ ಪೂಜಾರಿ ಗೋಳಿಹೊಳೆ, ಕಾರ್ಯದರ್ಶಿಯಾದಂತ ರಾಘವೇಂದ್ರ ಗಾಣಿಗ ಖಜಾಂಚಿ ಶ್ರೀ ಜಯಶೀಲ ಶೆಟ್ಟಿ, ಘಟಕದ ಅಧ್ಯಕ್ಷರಾದಂತಹ ಶ್ರೀ ಸುಬ್ಬಣ್ಣ ಕೊಠಾರಿ, ಶ್ರೀ ಪ್ರಭಾಕರ್ ಪೂಜಾರಿ, ಶ್ರೀ ವಿನಯ ಪೂಜಾರಿ, ಶ್ರೀ ನಾಗರಾಜ ಶೆಟ್ಟಿ ಕಾರ್ಯಕಾರಿಣಿ ಆದಂತಹ ಶ್ರೀ ಸುಧಾಕರ ಮರಾಠಿ, ಸದಸ್ಯರಾದಂತಹ ವೀರಭದ್ರ ಪೂಜಾರಿ, ಸಂದೇಶ್, ಸುರೇಶ್ ಮೊಳಹಳ್ಳಿ, ಸಂದೀಪ್, ಸಂತೋಷ್ ದೇವಾಡಿಗ ಹಾಗೆ ಟ್ಯಾಕ್ಸಿ ಮುಖಂಡರಾದಂತಹ ಶ್ರೀ ಜಾನ್ಸನ್ ಎಲ್ಲೂರು ಮತ್ತು ಚಂದ್ರ ಮರಾಠಿ ಗೋಳಿಹೊಳೆ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿ ಮುಕಾಂಬು ಹಾಗೂ ಸಂಘದ ಎಲ್ಲ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು


