ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ‘ಮೊಂತಾ’ ಚಂಡಮಾರುತ ಪ್ರಬಲ ಗೊಂಡಿದ್ದು ಆಂಧ್ರಪ್ರದೇಶ ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಮುನ್ನೆಚ್ಚರಿಕೆ ನೀಡಿ, ಸದ್ಯ ಚಂಡಮಾರುತ ಗಂಟೆಗೆ 15 ಕಿಲೋಮೀಟರ್ ವೇಗದಲ್ಲಿ ವಾಯುವ್ಯಕ್ಕೆ ಚಲಿಸುತ್ತಿದ್ದು ಅದು ಮತ್ತಷ್ಟು ಬಲಗೊಂಡು ನಾಳೆ ಸಂಜೆ ಅಥವಾ ರಾತ್ರಿ ವೇಳೆಗೆ ಆಂಧ್ರ ತೀರದ ಕಾಕಿನಾಡ ಬಳಿಯ ಮಚಲಿ ಪಟ್ನಂ ಮತ್ತು ಕಳಿಂಗಪಟ್ನಂ ನಡುವೆ ಭೂಮಿಗೆ ಹಪ್ಪಳಿಸುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದರಿಂದ ಪೂರ್ವ ಕರಾವಳಿ ಪ್ರದೇಶಗಳಲ್ಲಿ ಭಾರಿ ಮಳೆ ಆಗುತ್ತಿದ್ದು ಕಡಲು ಕೂಡ ಪ್ರಕ್ರುಷ್ಬ್ಧಗೊಂಡಿದೆ

