ಬೈಂದೂರು ತಾಲೂಕು ಕಂಬಳ ಸಮಿತಿ(ರಿ) ಇದರ ಸಭೆಯ ಇಂದು ಉಪ್ಪುಂದದ ಮಾತಾಶ್ರೀ ಸಭಾಭವನದಲ್ಲಿ ವೆಂಕಟರಮಣ ಗಾಣಿಗರ ಅಧ್ಯಕ್ಷತೆಯಲ್ಲಿ ಸಭೆ ನೆರವೇರಿತು.
2025 ನೇ ಸಾಲಿನ ಸಾಲಿನ ಕಂಬಳದ ದಿನ ನಿಗದಿಯ ಕುರಿತು ಚರ್ಚಿಸಲಾಯಿತು, ಹಾಗೂ ಕಂಬಳದ ಶಿಸ್ತು ನಿಯಮದ ಬಗ್ಗೆ ಚರ್ಚಿಸಲಾಯಿತು
ಹಲವು ವರ್ಷಗಳಿಂದ ಕಂಬಳ ಸಮಿತಿಯಲ್ಲಿ ಸೇವೆ ಸಲ್ಲಿಸುತ್ತಾ ಬಂದಿರುವ ಇತ್ತೀಚಿಗೆ ನಿಧನರಾಗಿರುವ ಗೌರವಾನ್ವಿತ ದಿ/ವೆಂಕಟ ಪೂಜಾರಿ ಸಸಿಹಿತ್ಲು ಹಾಗೂ ಕಂಬಳದ ಹಿರಿಯರಾದ ಕಳಿಹಿತ್ಲು ದಿ/ಸಂಜೀವ ಪೂಜಾರಿ ಕೆರ್ಗಾಲ್ ಇವರ ಆತ್ಮಕ್ಕೆ ಶಾಂತಿ ದೊರಕಲೆಂದು ಒಂದು ನಿಮಿಷ ಮೌನಚರಣೆ ನಡೆಸಲಾಯಿತು
ಕಳೆದ 2024ನೇ ಸಾಲಿನಲ್ಲಿ ಛಾಂಪಿಯನ್ ಪ್ರಶಸ್ತಿ ಪಡೆದ ಕೋಣಗಳ ಮಾಲಕರಿಗೆ ಅಭಿನಂದನೆ ಸಲ್ಲಿಸಲಾಯಿತು ಸಬ್ ಜ್ಯೂನಿಯರ್ ವಿಭಾಗದಲ್ಲಿ ಶ್ರೀ ಸ್ವಾಮಿ ಧಾಮ ಹೊಳೆಕಟ್ಟು ಕುಂಭಾಶಿ, ಜೂನಿಯರ್ ವಿಭಾಗದಲ್ಲಿ ಶ್ರೀ ಸ್ವಾಮಿ ಧಾಮ ಹೊಳೆ ಕಟ್ಟು ಕುಂಭಾಶಿ,ಹಗ್ಗ ಹಿರಿಯ ವಿಭಾಗದಲ್ಲಿ ದಿ/ವೆಂಕಟ ಪೂಜಾರಿ ಸಸಿಹಿತ್ಲು, ಕನೆಹಲಗೆ ವಿಭಾಗದಲ್ಲಿ ಶ್ರೀ ರಾಮ್ ಚೈತ್ರ ಪರಮೇಶ್ವರ್ ಭಟ್ ಬೋಳಂಬಳ್ಳಿ ಕ್ರಮವಾಗಿ ಪ್ರಶಸ್ತಿ ಪಡೆದುಕೊಂಡರು.
ಇತ್ತೀಚೆಗೆ ರಾಜ್ಯ ಕಂಬಳ ಅಸೋಸಿಯೇಷನ್ (ರಿ) ಇದರ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಆಯ್ಕೆಗೊಂಡ ವಿಕ್ರಂ ಪೂಜಾರಿ ಅವರನ್ನು ಗೌರವಿಸಲಾಯಿತು
ಕಂಬಳ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನೆರವೇರಿತು ಅಧ್ಯಕ್ಷರಾಗಿ ಸಸಿಹಿತ್ಲು ಮಂಜು ಪೂಜಾರಿ ,ಕಾರ್ಯದರ್ಶಿಯಾಗಿ ಸುಧೀರ್ ದೇವಾಡಿಗ ಮತ್ತು ಇತರರ ಆಯ್ಕೆಗೊಂಡರು.
ಸಭೆಯಲ್ಲಿ ಬೈಂದೂರು ರೈತ ಸಂಘದ ಅಧ್ಯಕ್ಷರಾದ ದೀಪಕ್ ಶೆಟ್ಟಿ, ವೆಂಕಟರಮಣ ಗಾಣಿಗ ನಾವುಂದ, ರಾಜು ದೇವಾಡಿಗ, ವಿಕ್ರಂ ಪೂಜಾರಿ ಉಪಸ್ಥಿತರಿದ್ದರು,
ಸಮಿತಿ ಕಾರ್ಯದರ್ಶಿ ಸುಧೀರ್ ದೇವಾಡಿಗ ಸ್ವಾಗತಗೈದರು,ಗಣಪ ಗಂಗನಾಡು ಧನ್ಯವಾದಗೈದರು,
ಕಿಶೋರ್ ಸಸಿಹಿತ್ಲು ಕಾರ್ಯಕ್ರಮ ನಿರೂಪಿಸಿದರು

