ಬೈಂದೂರಿನ ಭಾಗದ ಪ್ರಸಿದ್ಧ ಸಂಸ್ಥೆಯಾದ ಸುರಭಿ (ರಿ)ಬೈಂದೂರು ತನ್ನ ಬೆಳ್ಳಿ ಹಬ್ಬದ ಸಂಭ್ರಮದ “ರಜತಯಾನ”ಶೀರ್ಷಿಕೆ ಅಡಿ ಡಿಸೆಂಬರ್ ತಿಂಗಳ ಮೂರನೇ ವಾರದಲ್ಲಿ ರಾಜ್ಯಮಟ್ಟದ ನಾಟಕ ಸ್ಪರ್ಧೆ ನಡೆಸುವುದೆಂದು ಸುರಭಿ ಸಂಸ್ಥೆಯ ಅಧ್ಯಕ್ಷರಾದ ಆನಂದ ಮದ್ದೋಡಿಯವರು ಬೈಂದೂರಿನ ರೋಟರಿ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಿದರು.
ಕಾಸರಗೋಡು ಒಳಗೊಂಡಂತೆ ಕರ್ನಾಟಕ ರಾಜ್ಯ ಮಟ್ಟದ ನಾಟಕೋತ್ಸವದ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದ್ದು, ಕನಿಷ್ಠ 1 ಘಂಟೆ 30 ನಿಮಿಷ ಹಾಗೂ ಗರಿಷ್ಠ 2 ಗಂಟೆ 15 ನಿಮಿಷ ಅವಧಿಯ ಸಾಮಾಜಿಕ, ಐತಿಹಾಸಿಕ, ಪೌರಾಣಿಕ, ಜಾನಪದ ಅಥವಾ ಯಾವುದೇ ಪ್ರಕಾರದ ನಾಟಕ ಪ್ರದರ್ಶನ ಮಾಡಬಹುದು. ಸ್ಪರ್ಧೆಗೆ ಗರಿಷ್ಠ 8 ತಂಡಗಳನ್ನು ಆಯ್ಕೆ ಮಾಡಲಾಗುವುದು. ವಿಜೇತರಾದ ತಂಡಗಳಿಗೆ ಪ್ರಥಮ 40000 ದ್ವಿತೀಯ 30,000
ತೃತೀಯ20000 ಬಹುಮಾನಗಳನ್ನು ಹಾಗೂ ಶಾಶ್ವತ ಫಲಕಗಳನ್ನು ನೀಡಲಾಗುವುದು. ಹಾಗೂ ವೈಯಕ್ತಿಕ ಶ್ರೇಷ್ಠ ನಿರ್ದೇಶನ, ನಟ, ನಟಿ, ಸಂಗೀತ, ಬೆಳಕು ರಂಗಪರಿಕರ, ಪ್ರಸಾಧನ, ಬಾಲನಟನೆ / ಹಾಸ್ಯ ಪಾತ್ರಗಳಿಗೆ ನಗದು ಸಹಿತ ಬಹುಮಾನ ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸುವ ತಂಡಗಳಿಗೆ ಉಚಿತ ಊಟ, ವಸತಿ ಜೊತೆಗೆ ಬೈಂದೂರಿಗೆ ಬಂದು ಹೋಗುವ ಪ್ರಯಾಣದ ವೆಚ್ಚವನ್ನು ನೀಡಲಾಗುವುದು ಹಾಗೂ ಪ್ರತಿ ತಂಡಕ್ಕೆ ಗೌರವಧನವಾಗಿ ರೂ 5,000ವನ್ನು ನೀಡಲಾಗುವುದು. ಭರ್ತಿ ಮಾಡಿದ ಪ್ರವೇಶ ಪತ್ರ ಸ್ವೀಕರಿಸಲು 10 ನವೆಂಬರ್ 2025. ಕೊನೆಯ ದಿನಾಂಕವಾಗಿದ್ದು ,ಆಸಕ್ತ ತಂಡಗಳು ಸುರಭಿಯ ನಿರ್ದೇಶಕರಾದ ಶ್ರೀ ಸುಧಾಕರ
ಪಿ. ಬೈಂದೂರು (8217779338) ನಿಕಟಪೂರ್ವ ಅಧ್ಯಕ್ಷರಾದ ಶ್ರೀ ನಾಗರಾಜ ಪಿ. ಯಡ್ತರೆ (9343743340) ಸಾಂಸ್ಕೃತಿಕ ಕಾರ್ಯದರ್ಶಿ ಸತ್ಯನಾ ಕೊಡೇರಿ (9110641355) ಇವರನ್ನು ಸಂಪರ್ಕಿಸಬಹುದು ಎಂದು ಸುರಭಿ ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಪತ್ರಿಕಾಗೋಷ್ಠಿಯಲ್ಲಿ ನಿಕಟಪೂರ್ವಾಧ್ಯಕ್ಷ ನಾಗರಾಜ ಪಿ.ಯಡ್ತರೆ,ಸಾಂಸ್ಕೃತಿಕ ಸಮಿತಿ ಕಾರ್ಯದರ್ಶಿ ಸತ್ಯನಾ ಕೊಡೇರಿ,ಉಪಾಧ್ಯಕ್ಷ ಸುರೇಶ ಹುದಾರ್,ಕಾರ್ಯಕಾರಿ ಸಮಿತಿ ಸದಸ್ಯ ಗಣೇಶ ಪೂಜಾರಿ ಹಾಜರಿದ್ದರು.
ಸಂಚಾಲಕರಾದ ಸುಧಾಕರ ಪಿ.ಬೈಂದೂರು ಸ್ವಾಗತಿಸಿದರು.

