ಶ್ರೀ ಈಶ್ವರ ಮಾರಿಕಾಂಬ ದೇವಸ್ಥಾನದಲ್ಲಿ ಶ್ರೀಶಾರದೋತ್ಸವ ಸಮಿತಿಯ ಜಂಟಿ ಆಶ್ರಯದಲ್ಲಿ 32ನೇ ಶಾರದೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು.
ಧಾರ್ಮಿಕ ಮತ್ತು ಸಾಂಸ್ಕೃತಿಕ ಸಭಾ ಕಾರ್ಯಕ್ರಮ ಸಂದರ್ಭ ದೇವಳದ ಅನುವಂಶಿಕ ಮುಕ್ತೇಶ್ವರರಾದ ಅಭಿಜಿತ್ ಹೆಗ್ಡೆ ಮಾತನಾಡಿ ಧಾರ್ಮಿಕ ಕಾರ್ಯಕ್ರಮಗಳು ಗ್ರಾಮ ಗ್ರಾಮವನ್ನು ಒಗ್ಗೂಡಿಸುತ್ತದೆ, ಮನುಷ್ಯನ ನಡುವೆ ಸಂಘಟಿತ ಜೀವನವನ್ನು ಬೆಸೆಯುತ್ತದೆ ಎಂದರು.
ಕಾರ್ಯಕ್ರಮದ ವೇದಿಕೆಯಲ್ಲಿ ಅನುವಂಶಿಕ ಮುಕ್ತೇಶ್ವರರಾದ ವಸಂತ್ ಕುಮಾರ್ ಶೆಟ್ಟಿ ,ಶ್ರೀ ಸಾರ್ವಜನಿಕ ಶಾರದೋತ್ಸವ ಸಮಿತಿ ಕಳವಾಡಿ ಮುಯ್ಯಾಡಿ ಇದರ ಅಧ್ಯಕ್ಷರಾದ ಮಂಜು ಭಂಡಾರಿ, ಕಾರ್ಯದರ್ಶಿ ಗೋವಿಂದ ಆಚಾರ್ಯ ಉಪಸ್ಥಿತರಿದ್ದರು.


ಕ್ರೀಡಾ ಚಟುವಟಿಕೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ನೀಡಿ ಅಭಿನಂದಿಸಲಾಯಿತು, ನಂತರ ಬಟರ್ ಫ್ಲೈ ಡ್ಯಾನ್ಸ್ ಕ್ರೀವ್ ಕುಂದಾಪುರ ಹಾಗೂ ಅಪ್ಪು ಮೆಲೋಡಿಸ್ ಭಟ್ಕಳ ಇವರಿಂದ ಸಂಗೀತ ರಸಸಂಜೆ ,ನೃತ್ಯ ವೈಭವ ಹಾಗೂ ಸ್ಥಳೀಯ ಪುಟಾಣಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿತು.

ನಗರೋತ್ಸವದಲ್ಲಿ ಶ್ರೀ ಧರ್ಮಸ್ಥಳ ಭಜನಾ ಪರಿಷತ್ ಸಹಯೋಗದಲ್ಲಿನ ವಿವಿಧ ಕುಣಿತ ಭಜನಾ ತಂಡಗಳು,ನಾಸಿಕ್ ಬ್ಯಾಂಡ್, ಚಂಡೆ, ವಿವಿಧ ಟ್ಯಾಬ್ಲೊಗಳೊಂದಿಗೆ ಅದ್ದೂರಿ ಮೆರವಣಿಗೆದೊಂದಿಗೆ ಶಾರದಾಂಬೆಯ ಮೂರ್ತಿಯನ್ನು ಸುಮನಾವತಿ ನದಿಯಲ್ಲಿ ಜಲಸ್ಥಂಬನ ಮಾಡಲಾಯಿತು.

URL has been copied successfully!

Discover more from BYNDOOR XPRESS

Subscribe now to keep reading and get access to the full archive.

Continue reading