ಬೈಂದೂರು: ಬೈಂದೂರು ವ್ಯವಸಾಯ ಸೇವಾ ಸಹಕಾರಿ ಸಂಘ ಬೈಂದೂರು ಪ್ರಸಕ್ತ ಸಾಲಿನಲ್ಲಿ ಸುಮಾರು 859.49 ಕೋಟಿಗೂ ಮೀರಿ ವ್ಯವಹಾರ ನಡೆಸಿ ಸುಮಾರು 1.03 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದೆ, ಹಾಗೆ ಸದಸ್ಯರಿಗೆ ಶೇಕಡಾ 15 ದಿವಿಡೆರಾಗುವುದೆಂದು ಸಂಘದ ಅಧ್ಯಕ್ಷ ಟಿ ನಾರಾಯಣ ಹೆಗ್ಡೆ ಅವರು ಯಡ್ತರೆ ಜೆ ಎನ್ ಆರ್ ಸಭಾಭವನದಲ್ಲಿ ಸೋಮವಾರ ನಡೆದ ಸಂಘದ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಹೇಳಿದರು.

ಈ ಸಂದರ್ಭ ಪ್ರಗತಿಪರ ಕೃಷಿಕರು ಹಾಗೂ ಸಾಧಕರನ್ನು ಸನ್ಮಾನಿಸಲಾಯಿತು. ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಅತ್ಯಧಿಕ ಅಂಕಗಳಿಸಿದ ಸಂಘದ ವ್ಯಾಪ್ತಿಯ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಸಂಘದ ಆಡಳಿತ ಮಂಡಳಿ ಸದಸ್ಯರ ಎಂ ಎಚ್ ಗುರುದತ್ತ, ಹೆರಿಯ ದೇವಾಡಿಗ, ಚಿಕ್ಕು ಪೂಜಾರಿ, ಎನ್ ನಾಗರಾಜ್ ಶೆಟ್ಟಿ, ಟಿ ಬಾಬು ಶೆಟ್ಟಿ, ಜ್ಯೋತಿ, ಶಂಕರ್ ನಾಯಕ್, ವಿಜಯ್ ಶೇರುಗಾರ್ ಮುಂತಾದವರು ಉಪಸ್ಥಿತರಿದ್ದರು…

ಆಡಳಿತ ಮಂಡಳಿ ಸದಸ್ಯರುಗಳಾದ ಸದಾಶಿವ ಡಿ ಪಡುವರಿ ಸ್ವಾಗತಿಸಿ, ಅರುಣ್ ಕುಮಾರ್ ಶಿರೂರು ಕಾರ್ಯಕ್ರಮ ನಿರೂಪಿಸಿದರು.
ವಾರ್ಷಿಕ ವರದಿಯನ್ನು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತಾಪ್ ಚಂದ್ರ ಶೆಟ್ಟಿ ಮಂಡಿಸಿದರು.

URL has been copied successfully!

Discover more from BYNDOOR XPRESS

Subscribe now to keep reading and get access to the full archive.

Continue reading