ಕಂಬಳ ಕ್ರೀಡಾ ಇಲಾಖೆ ಸ್ಥಾನಮಾನ : ಸರಕಾರದಿಂದ ಶೀಘ್ರ ಅಧಿಕೃತ ಪ್ರಕಟಣೆ, ತಿಂಗಳೊಳಗೆ ಅಸೋಸಿಯೇಷನ್ ಸ್ಥಾಪನೆಗೊಳ್ಳುವ ಸಾದ್ಯತೆ

ಕಂಬಳ ಕ್ರೀಡಾ ಇಲಾಖೆ ಸ್ಥಾನಮಾನ : ಸರಕಾರದಿಂದ ಶೀಘ್ರ ಅಧಿಕೃತ ಪ್ರಕಟಣೆ, ತಿಂಗಳೊಳಗೆ ಅಸೋಸಿಯೇಷನ್ ಸ್ಥಾಪನೆಗೊಳ್ಳುವ ಸಾದ್ಯತೆ

ರಾಜ್ಯ ಸರ್ಕಾರವು ಕಂಬಳವನ್ನು ರಾಜ್ಯ ಕ್ರೀಡೆಯಾಗಿ ಅಧಿಕೃತವಾಗಿ ಘೋಷಿಸಲು ತ ಇದು ಕಂಬಳ ಕ್ರೀಡೆಗೆ ಒಂದು ಮಹತ್ವದ ಮೈಲಿಗಲ್ಲಾಗಲಿದೆ. ಇದರೊಂದಿಗೆ, ಕಂಬಳ ಅಸೋಸಿಯೇಶನ್ ರಚನೆಯಾಗಿದ್ದು, ಕಂಬಳ ಸಮಿತಿ ಅಧ್ಯಕ್ಷರೇ ಇದರ ಅಧ್ಯಕ್ಷರಾಗಿರುತ್ತಾರೆ. ಈ ಕ್ರಮವು ಕಂಬಳಕ್ಕೆ ಹೆಚ್ಚಿನ ಪ್ರೋತ್ಸಾಹ, ಅನುದಾನ ಮತ್ತು ಸೌಲಭ್ಯಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.
ರಾಜ್ಯದ ಕ್ರೀಡಾ ಪ್ರಾಧಿಕಾರದಿಂದ ಉಳಿದ ಕ್ರೀಡೆಗಳಿಗೆ ಸಿಗುವ ಸೌಲಭ್ಯಗಳು ಕಂಬಳ ಕ್ರೀಡೆಗೂ ಅನ್ವಯವಾಗಲಿದೆ.
ಹೆಚ್ಚಿನ ಪ್ರೋತ್ಸಾಹ ಧನ, ವಿಶೇಷ ಅನುದಾನ, ಓಟಗಾರರು, ಕೋಣದ ಮಾಲೀಕರು, ಇತರರಿಗೆ ಸೌಲಭ್ಯ ದೊರೆಯಲಿದೆ
ರಾಜ್ಯ ಸರಕಾರವೇ ಕಂಬಳ ಅಸೋಸಿಯೇಶನ್‌ಗೆ ಬೈಲಾ ಸಿದ್ಧಪಡಿಸುತ್ತಿದೆ.
ರಾಜ್ಯ ಸರಕಾರ ಕರುನಾಡಿನ ಜಾನಪದ ಕ್ರೀಡೆ ಕಂಬಳಕ್ಕೆ ರಾಜ್ಯ ಕ್ರೀಡೆಯಾಗಿ ಮಾನ್ಯತೆ ನೀಡಲು ನಿರ್ಧರಿಸಿದ್ದು, ಈ ಬಗ್ಗೆ ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ಹೊರಬೀಳಲಿದೆ. ಈ ಮೂಲಕ ಕಂಬಳ ಕ್ರೀಡೆಗೆ ಮತ್ತೊಂದು ಹಂತದ ಯಶಸ್ಸು ಸಿಗಲಿದೆ.
ಕಂಬಳ ಕ್ರೀಡೆಗೆ ರಾಜ್ಯ ಸರಕಾರಕ್ಕೆ ಅಧಿಕೃತ ಮಾನ್ಯತೆ ಘೋಷಣೆಯಾದರೆ ರಾಜ್ಯದ ಕ್ರೀಡಾ ಪ್ರಾಧಿಕಾರದಿಂದ ಉಳಿದ ಕ್ರೀಡೆಗಳಿಗೆ ಸಿಗುವ ಸೌಲಭ್ಯಗಳು ಕಂಬಳ ಕ್ರೀಡೆಗೂ ಅನ್ವಯವಾಗಲಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಂಬಳಕ್ಕೆ ರಾಜ್ಯ ಕ್ರೀಡೆ ಮಾನ್ಯತೆ ನೀಡಲು ಒಪ್ಪಿಗೆ ಸೂಚಿಸಿದ್ದಾರೆಂದು ಮೂಲಗಳಿಂದ ತಿಳಿದು ಬಂದಿದೆ.

ಕಂಬಳ ಅಸೋಸಿಯೇಶನ್‌ ಶೀಘ್ರ ಪ್ರಕಟ:
ಕಂಬಳಕ್ಕೆ ಒಂದೆಡೆ ರಾಜ್ಯದ ಮಾನ್ಯತೆಯ ಸಿದ್ಧತೆ ಅಂತಿಮ ಹಂತದಲ್ಲಿದ್ದರೆ, ಇನ್ನೊಂದೆಡೆ ಕಂಬಳ ಅಸೋಸಿಯೇಶನ್‌ ನೇಮಕ ಪಟ್ಟಿಯನ್ನು ರಾಜ್ಯ ಸರಕಾರ ಅಂತಿಮಗೊಳಿಸಿದೆ. ಕಂಬಳ ಸಮಿತಿ ಅಧ್ಯಕ್ಷರೇ ಕಂಬಳ ಅಸೋಸಿಯೇಶನ್‌ಗೆ ಅಧ್ಯಕ್ಷರಾಗಿದ್ದು, ಉಳಿದಂತೆ ಗೌರವ ಸಲಹೆಗಾರರು, ಸದಸ್ಯರು ಸೇರಿದಂತೆ 13 ಮಂದಿಯ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ.

URL has been copied successfully!

Discover more from BYNDOOR XPRESS

Subscribe now to keep reading and get access to the full archive.

Continue reading