ನಾರಾಯಣ ಶೆಟ್ಟಿ ಅವರು ವಂತ್ಸೆಯ ಬ್ಯಾಂಕೊಂದರಲ್ಲಿ ಖಾತೆ ಹೊಂದಿದ್ದು ಅದಕ್ಕೆ ಪುತ್ರ ಅರುಣ್ ಕುಮಾರ್ ಶೆಟ್ಟಿ ಅವರ ಮೊಬೈಲ್ ನಂಬರ್ ಲಿಂಕ್ ಆಗಿದೆ. ಸೆ. 17ರ ಮಧ್ಯಾಹ್ನ 3.20ಕ್ಕೆ ಅರುಣ್ ಅವರ ಮೊಬೈಲ್‌ಗೆ 9008081056 ಸಂಖ್ಯೆಯಿಂದ ಕರೆ ಬಂದಿತ್ತು. ಕರೆ ಸ್ವೀಕರಿಸಿದಾಗ ರಾಹುಲ್ ಎಂಬಾತ ಹಿಂದಿಯಲ್ಲಿ ಮಾತನಾಡಿದ್ದ ಕೂಡಲೇ ಅರುಣ್ ಅವರು ರಾಂಗ್ ನಂಬರ್ ಎಂದು ಹೇಳಿ ಕರೆ ಕಡಿತ ಮಾಡಿದ್ದರು. ಆ ಬಳಿಕ ಅರುಣ್ ಅವರ ಮೊಬೈಲ್‌ಗೆ ಒಟಿಪಿ ಇರುವ ಸಂದೇಶ ಬಂದಿರುತ್ತು.
ಇದರಿಂದ ಅನುಮಾನಗೊಂಡ ಅರುಣ್ ಅವರು ಕೂಡಲೇ ಬ್ಯಾಂಕ್ ಸಿಬಂದಿಯನ್ನು ಮೊಬೈಲ್ ಮೂಲಕ ಸಂಪರ್ಕಿಸಿ ವಿಚಾರಿಸಿದಾಗ ತಂದೆಯ ಖಾತೆಯಲ್ಲಿ ಕೇವಲ 54 ರೂ. ಇದೆಯೆಂದು ತಿಳಿಯಿತು. ವರ್ಗಾವಣೆ ವಿವರ ಪರಿಶೀಲಿಸಿದಾಗ ಅವರ ಖಾತೆಯಲ್ಲಿ 1.27 ಲಕ್ಷ ರೂ. ಇತ್ತು. ಅದರಲ್ಲಿ 54 ರೂ. ಬಿಟ್ಟು ಮೊದಲಿಗೆ 50 ಸಾವಿರ ರೂ., ಅನಂತರ 50 ಸಾವಿರ ರೂ. ಹಾಗೂ 27 ಸಾವಿರ ರೂ.ಗಳನ್ನು ಬೇರೆಯವರ ಬ್ಯಾಂಕ್ ಖಾತೆಗೆ ಸೈಬರ್‌ಕಳ್ಳರು ಅಕ್ರಮವಾಗಿ ವರ್ಗಾಯಿಸಿದ್ದರು.
1930 ನಂಬ್ರಕ್ಕೆ ಫೋನ್ ಮಾಡಿದ ಬಳಿಕ 27000 ರೂ. ಹಣ ಖಾತೆಗೆ ಮರು ಜಮೆಯಾಗಿದೆ.
ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

