ಕಮಲಶಿಲೆ: ಕಡವೆ ಅಡ್ಡ ಬಂದು ಬೈಕ್ ಸವಾರ ಸ್ಥಳದಲ್ಲೇ ಸಾವು, ಸಹ ಸವಾರ ಗಂಭೀರ ಗಾಯ..

ಸಿದ್ದಾಪುರ ರಸ್ತೆಯ ತಾರೆಕುಡ್ಡು ಬಳಿ ಕಮಲಶಿಲೆಯಿಂದ ನೆಲ್ಲಿಕಟ್ಟೆಯ ಕಡೆಗೆ ಚಲಿಸುತ್ತಿದ್ದ ಬೈಕಿಗೆ ಕಡವೆಯೊಂದು ಅಡ್ಡ ಬಂದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನಪ್ಪಿದ್ದು, ಸಹ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಸಂಭವಿಸಿದೆ.

ಶ್ರೇಯಸ್ ಮೊಗವೀರ ನೆಲ್ಲಿಕಟ್ಟೆ (22) ಮೃತಪಟ್ಟ ಯುವಕ. ಪಡುವಾಲೂರರು ನಿವಾಸಿ ವಿಠಲ ಅವರ ಪುತ್ರ ವಿಪ್ಪೇಶ್ (19) ಗಂಭೀರವಾಗಿ ಗಾಯಗೊಂಡಿದ್ದು, ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ನೇಹಿತರಾಗಿದ್ದ ಅವರಿಬ್ಬರೂ ಕಮಲಶಿಲೆ ದೇವಸ್ಥಾನಕ್ಕೆ ತೆರಳಿ ವಾಪಸಾಗುತ್ತಿರುವಾಗ ತಾರೆಕೊಡ್ಡು ಬಳಿ ಏಕಾಏಕಿ ದೊಡ್ಡ ಕಡೆವೆಯು ಬೈಕಿಗೆ ಅಡ್ಡ ಬಂದಿದ್ದು, ಬೈಕ್ ಅದಕ್ಕೆ ಢಿಕ್ಕಿ ಹೊಡೆದು ಪಲ್ಟಿಯಾಯಿತು. ಬೈಕ್ ನಷ್ಟು ನುಜ್ಜಾಗಿದೆ. ಕಡವೆ ಕೂಡ ಸ್ಥಳದಲ್ಲೇ ಮೃತಪಟ್ಟಿದೆ.

ನೆಲ್ಲಿಕಟ್ಟೆ ಸುರೇಶ ಮೊಗವೀರ ಹಾಗೂ ಯಶೋದಾ ಮೊಗವೀರ ದಂಪತಿಯ ಇಬ್ಬರು ಮಕ್ಕಳಲ್ಲಿ ಶ್ರೇಯಸ್ ಕಿರಿಯ ಪುತ್ರ. ಹಿರಿಯ ಪುತ್ರಿಗೆ ಮದುವೆಯಾಗಿದೆ. ಶ್ರೇಯಸ್ ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದು, ಇತ್ತೀಚೆಗೆ ಊರಿಗೆ ಬಂದಿದ್ದರು.
ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

URL has been copied successfully!

Discover more from BYNDOOR XPRESS

Subscribe now to keep reading and get access to the full archive.

Continue reading