2011 ರ ಜನಗಣತಿಯನ್ನಾಧರಿಸಿ ವಾರ್ಡ್ ವಾರ್ಡ್ ಮೀಸಲಾತಿಯನ್ನು ನಿಗದಿಪಡಿಸಿ ಅಂತಿಮ ಅದಿ ಸೂಚನೆಯನ್ನು ಕರ್ನಾಟಕ ವಿಶೇಷ ರಾಜ್ಯ ಪತ್ರದಲ್ಲಿ ಪ್ರಕಟಿಸಲಾಗಿದೆ.
ತಾರಾಪತಿ – ಹಿಂದುಳಿದ ವರ್ಗ- ಎ, ವಿರೂಪಾಕ್ಷಿ – ಸಾಮಾನ್ಯ, ಸೋಮೇಶ್ವರ – ಹಿಂದುಳಿದ ವರ್ಗ-ಬಿ( ಮಹಿಳೆ ) , ದೊಂಬೆ- ಸಾಮಾನ್ಯ , ಪಂಚಲಿಂಗೇಶ್ವರಿ- ಹಿಂದುಳಿದ ವರ್ಗ- ಎ, ಆನಂದೂರು – ತೂದಳ್ಳಿ- ಸಾಮಾನ್ಯ (ಮಹಿಳೆ), ಕಡಕೆ – ಮದ್ದೋಡಿ – ಹಿಂದುಳಿದ ವರ್ಗ – ಬಿ ,ಯೋಜನಾ ನಗರ – ಪರಿಶಿಷ್ಟ ಜಾತಿ, ಬಂಕೇಶ್ವರ – ಹಿಂದುಳಿದ ವರ್ಗ – ಎ, ಬೈಂದೂರು ಪೇಟೆ – ಸಾಮಾನ್ಯ, ವೆಂಕಟರಮಣ – ಸಾಮಾನ್ಯ, ಮಯ್ಯಾಡಿ – ಕಳವಾಡಿ – ಹಿಂದುಳಿದ ವರ್ಗ -ಎ (ಮಹಿಳೆ), ಬಾಡ – ಬಿಯಾರ – ಸಾಮಾನ್ಯ , ಸುರ್ಕುಂದ- ಹಿಂದುಳಿದ ವರ್ಗ ಎ, ಗಂಗನಾಡು – ಪರಿಶಿಷ್ಟ ಪಂಗಡ, ಚಂದನ – ವಸ್ರೆ- ತಗ್ಗರ್ಸೆ ಪೇಟೆ ಹಾಗೂ ನೆಲ್ಯಾಡಿ – ಕಾಡೋಡಿಗೆ ಸಾಮಾನ್ಯ ಮಹಿಳೆ ಮೀಸಲಾತಿಯನ್ನು ನಿಗದಿಪಡಿಸಿದ್ದು,
ಈ ಬಗ್ಗೆ ಸಲಹೆ ಅಥವಾ ಆಕ್ಷೇಪಣೆಗಳಿದ್ದಲ್ಲಿ ಪ್ರಕಟಣೆಯ ದಿನಾಂಕದಿಂದ 7 ದಿನಗಳ ಒಳಗಾಗಿ ಲಿಖಿತ ರೂಪದಲ್ಲಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿಯು ಆಗಿರುವ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

