ದೇಶದ ಭವಿಷ್ಯದ ಯೋಜನೆಗಳಿಗೆ ಅಡಿಪಾಯವಾಗುವ ಜನಗಣತಿ 2027 ಪ್ರಕ್ರಿಯೆಗೆ ರಾಜ್ಯದಲ್ಲಿ ಚಾಲನೆ ನೀಡಿದೆ. ಈ ಬಾರಿ ನಾಗರಿಕರು ತಮ್ಮ ಮಾಹಿತಿಯನ್ನು ತಾವೇ ಆನ್ಲೈನ್ ಮೂಲಕ ದಾಖಲಿಸುವ ಸ್ವಯಂ ಗಣತಿ ವ್ಯವಸ್ಥೆಯನ್ನು ಪರಿಚಯಿಸಲಾಗಿದ್ದು, ರಾಜ್ಯದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೇಶ್ ಅವರು ತಮ್ಮ ಮೊಬೈಲ್ ಮೂಲಕ ಈ ಪ್ರಕ್ರಿಯೆ ಪೂರ್ಣಗೊಳಿಸಿ ಅಭಿಯಾನಕ್ಕೆ ಚಾಲನೆ ನೀಡಿದರು.
ಅಧಿಕೃತ ಪೋರ್ಟಲ್: se.census.gov.in
ಅವಧಿ ಏಪ್ರಿಲ್ 1ರಿಂದ ಏಪ್ರಿಲ್ 15 ರ ತನಕ
ಮೊಬೈಲ್ ಸಂಖ್ಯೆ ಮತ್ತು ಓಟಿಪಿ ಮೂಲಕ ಲಾಗಿನ್ ಆಗಿ ಕೇವಲ ಐದರಿಂದ ಹತ್ತು ನಿಮಿಷಗಳಲ್ಲಿ ಮಾಹಿತಿಯನ್ನು ಸಲ್ಲಿಸಿ ಕಡೆಗೆ ಸಿಸ್ಟಂನಲ್ಲಿ ದೊರೆಯುವ ಅರ್ಜಿ ಸಂಖ್ಯೆಯನ್ನು ಗಣತಿ ದಾರರಿಗೆ ನೀಡಿ.

