ಉಡುಪಿ: ಕರ್ನಾಟಕ ಸರಕಾರದ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು (RDPR) ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 123ರ ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಉಡುಪಿ ಜಿಲ್ಲೆಯ ತಾಲೂಕು ಪಂಚಾಯತ್‌ಗಳ ಕ್ಷೇತ್ರವಾರು ಸದಸ್ಯ ಸ್ಥಾನಗಳ ಮೀಸಲಾತಿ ಪಟ್ಟಿಯನ್ನು ಅಧಿಕೃತವಾಗಿ ಹೊರಡಿಸಿದೆ.
ಸರ್ಕಾರ ಹೊರಡಿಸಿರುವ ಅಧಿಸೂಚನೆಯಂತೆ ಉಡುಪಿ ಜಿಲ್ಲೆಯ ಒಟ್ಟು 7 ತಾಲೂಕುಗಳಲ್ಲಿ ಒಟ್ಟು 95 ತಾಲೂಕು ಪಂಚಾಯತ್ ಸ್ಥಾನಗಳು ನಿಗದಿಯಾಗಿದ್ದು, ಅದರಲ್ಲಿ 49 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ.
ಉಡುಪಿ ಜಿಲ್ಲೆಯ ತಾಲೂಕುವಾರು ಮೀಸಲಾತಿ ವಿವರ:
- ಬೈಂದೂರು: ಒಟ್ಟು 11 ಸ್ಥಾನಗಳು (ಮಹಿಳೆಯರಿಗೆ 6 ಸ್ಥಾನಗಳು).
- ಪರಿಶಿಷ್ಟ ಜಾತಿ: 1 (ಮಹಿಳೆ 1)
- ಪರಿಶಿಷ್ಟ ಪಂಗಡ: 1 (ಮಹಿಳೆ 1)
- ಹಿಂದುಳಿದ ವರ್ಗ ‘ಅ’: 2 (ಮಹಿಳೆ 1)
- ಹಿಂದುಳಿದ ವರ್ಗ ‘ಬ’: 1 (ಮಹಿಳೆ 1)
- ಸಾಮಾನ್ಯ: 6 (ಮಹಿಳೆ 2)
- ಕುಂದಾಪುರ: ಒಟ್ಟು 20 ಸ್ಥಾನಗಳು (ಮಹಿಳೆಯರಿಗೆ 10 ಸ್ಥಾನಗಳು).
- ಪರಿಶಿಷ್ಟ ಜಾತಿ: 1 (ಮಹಿಳೆ 1)
- ಪರಿಶಿಷ್ಟ ಪಂಗಡ: 1 (ಮಹಿಳೆ 1)
- ಹಿಂದುಳಿದ ವರ್ಗ ‘ಅ’: 6 (ಮಹಿಳೆ 3)
- ಹಿಂದುಳಿದ ವರ್ಗ ‘ಬ’: 1 (ಮಹಿಳೆ 1)
- ಸಾಮಾನ್ಯ: 11 (ಮಹಿಳೆ 4)
- ಉಡುಪಿ: ಒಟ್ಟು 13 ಸ್ಥಾನಗಳು (ಮಹಿಳೆಯರಿಗೆ 7 ಸ್ಥಾನಗಳು).
- ಪರಿಶಿಷ್ಟ ಜಾತಿ: 1 (ಮಹಿಳೆ 1), ಪರಿಶಿಷ್ಟ ಪಂಗಡ: 1 (ಮಹಿಳೆ 1), ಹಿಂದುಳಿದ ವರ್ಗ ‘ಅ’: 3 (ಮಹಿಳೆ 2), ಹಿಂದುಳಿದ ವರ್ಗ ‘ಬ’: 1 (ಮಹಿಳೆ 0), ಸಾಮಾನ್ಯ: 7 (ಮಹಿಳೆ 3).
- ಕಾರ್ಕಳ: ಒಟ್ಟು 16 ಸ್ಥಾನಗಳು (ಮಹಿಳೆಯರಿಗೆ 8 ಸ್ಥಾನಗಳು).
- ಪರಿಶಿಷ್ಟ ಜಾತಿ: 2 (ಮಹಿಳೆ 1), ಪರಿಶಿಷ್ಟ ಪಂಗಡ: 1 (ಮಹಿಳೆ 1), ಹಿಂದುಳಿದ ವರ್ಗ ‘ಅ’: 4 (ಮಹಿಳೆ 2), ಹಿಂದುಳಿದ ವರ್ಗ ‘ಬ’: 1 (ಮಹಿಳೆ 1), ಸಾಮಾನ್ಯ: 8 (ಮಹಿಳೆ 3).
- ಬ್ರಹ್ಮಾವರ: ಒಟ್ಟು 16 ಸ್ಥಾನಗಳು (ಮಹಿಳೆಯರಿಗೆ 8 ಸ್ಥಾನಗಳು).
- ಪರಿಶಿಷ್ಟ ಜಾತಿ: 1 (ಮಹಿಳೆ 1), ಪರಿಶಿಷ್ಟ ಪಂಗಡ: 1 (ಮಹಿಳೆ 1), ಹಿಂದುಳಿದ ವರ್ಗ ‘ಅ’: 4 (ಮಹಿಳೆ 2), ಹಿಂದುಳಿದ ವರ್ಗ ‘ಬ’: 1 (ಮಹಿಳೆ 1), ಸಾಮಾನ್ಯ: 9 (ಮಹಿಳೆ 3).
- ಕಾಪು: ಒಟ್ಟು 12 ಸ್ಥಾನಗಳು (ಮಹಿಳೆಯರಿಗೆ 6 ಸ್ಥಾನಗಳು).
- ಪರಿಶಿಷ್ಟ ಜಾತಿ: 1 (ಮಹಿಳೆ 1), ಪರಿಶಿಷ್ಟ ಪಂಗಡ: 1 (ಮಹಿಳೆ 1), ಹಿಂದುಳಿದ ವರ್ಗ ‘ಅ’: 3 (ಮಹಿಳೆ 2), ಹಿಂದುಳಿದ ವರ್ಗ ‘ಬ’: 1 (ಮಹಿಳೆ 0), ಸಾಮಾನ್ಯ: 6 (ಮಹಿಳೆ 2).
- ಹೆಬ್ರಿ: ಒಟ್ಟು 7 ಸ್ಥಾನಗಳು (ಮಹಿಳೆಯರಿಗೆ 4 ಸ್ಥಾನಗಳು).
- ಪರಿಶಿಷ್ಟ ಜಾತಿ: 1 (ಮಹಿಳೆ 1), ಪರಿಶಿಷ್ಟ ಪಂಗಡ: 1 (ಮಹಿಳೆ 1), ಹಿಂದುಳಿದ ವರ್ಗ ‘ಅ’: 1 (ಮಹಿಳೆ 1), ಹಿಂದುಳಿದ ವರ್ಗ ‘ಬ’: 0, ಸಾಮಾನ್ಯ: 4 (ಮಹಿಳೆ 1).
ಜಿಲ್ಲೆಯ ಒಟ್ಟಾರೆ ಮೀಸಲಾತಿ ಹಂಚಿಕೆ (ಒಟ್ಟು 95 ಸ್ಥಾನಗಳು):
- ಪರಿಶಿಷ್ಟ ಜಾತಿ (SC): 8 ಸ್ಥಾನಗಳು (ಮಹಿಳೆಯರಿಗೆ 7)
- ಪರಿಶಿಷ್ಟ ಪಂಗಡ (ST): 7 ಸ್ಥಾನಗಳು (ಮಹಿಳೆಯರಿಗೆ 7)
- ಹಿಂದುಳಿದ ವರ್ಗ ‘ಅ’ (OBC-A): 23 ಸ್ಥಾನಗಳು (ಮಹಿಳೆಯರಿಗೆ 3)
- ಹಿಂದುಳಿದ ವರ್ಗ ‘ಬ’ (OBC-B): 6 ಸ್ಥಾನಗಳು (ಮಹಿಳೆಯರಿಗೆ 4)
- ಸಾಮಾನ್ಯ (General): 51 ಸ್ಥಾನಗಳು (ಮಹಿಳೆಯರಿಗೆ 18)
ಸರ್ಕಾರದ ಈ ಅಧಿಸೂಚನೆಯೊಂದಿಗೆ ಜಿಲ್ಲೆಯಲ್ಲಿ ಮುಂಬರುವ ತಾಲೂಕು ಪಂಚಾಯತ್ ಚುನಾವಣೆಯ ಕಾವು ಏರತೊಡಗಿದ್ದು, ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

