ಜೆಸಿಐ ಸಂಸ್ಥೆ ವತಿಯಿಂದ ಸಮಾಜಮುಖಿ ಹಾಗೂ ಸಾಧನಾ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ನೀಡಲಾಗುವ ಪ್ರತಿಷ್ಠಿತ ‘ಸಾಧನಾಶ್ರೀ’ ಪ್ರಶಸ್ತಿಗೆ ಜೇಸಿಐ ಬೈಂದೂರು ಸಿಟಿ ಘಟಕದ ನಿಕಟ ಪೂರ್ವ ಅಧ್ಯಕ್ಷರಾದ ಜೆಸಿ ರಾಜು ಮೊಗವೀರ ಭಾಜನರಾಗಿದ್ದಾರೆ. ಪ್ರಶಸ್ತಿ ಪ್ರಧಾನ ಸಮಾರಂಭವು ಮಡಂತ್ಯಾರಿನಲ್ಲಿ ಅದ್ದೂರಿಯಾಗಿ ಜರುಗಿತು.
​ಕಾರ್ಯಕ್ರಮದಲ್ಲಿ ಜೆಸಿಐ ಭಾರತ ವಲಯ 15ರ ವಲಯಾಧ್ಯಕ್ಷರಾದ ಜೆಎಪ್ಎಸ್. ಸಂತೋಷ್ ಶೆಟ್ಟಿ ಅವರು ಪ್ರಶಸ್ತಿ ಪ್ರಧಾನ ಮಾಡಿದರು. ಸಮಾರಂಭದಲ್ಲಿ ವಲಯ ಉಪಾಧ್ಯಕ್ಷರಾದ ಜೆಎಪ್ಎಂ. ಪ್ರದೀಪ್ ಶೆಟ್ಟಿ ಇನ್ನಾ , ಪಿಆರ್ ಮತ್ತು ಮಾರ್ಕೆಟಿಂಗ್ ವಿಭಾಗದ ನಿರ್ದೇಶಕರಾದ ಜೆಸಿ ಸ್ವರಾಜ್ ಶೆಟ್ಟಿ, ವ್ಯವಹಾರ ವಿಭಾಗದ ನಿರ್ದೇಶಕರಾದ ಜೆಸಿ ವಿಕೇಶ್ ಮಾನ್ಯ, ಬೈಂದೂರು ಸಿಟಿ ಜೆಸಿಐ ಅಧ್ಯಕ್ಷರಾದ ಜೆಸಿ ಚೈತ್ರ ಸತೀಶ್, ಸೇರಿದಂತೆ ಪ್ರಮುಖ ಪದಾಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.
​ಇವರ ಸಾಮಾಜಿಕ ಸೇವೆ, ರಕ್ತದಾನ ಸೇವೆ, ಹಾಗೂ ಅವರ ಸಾಧನೆಯನ್ನು ಗುರುತಿಸಿ. ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

URL has been copied successfully!

Discover more from BYNDOOR XPRESS

Subscribe now to keep reading and get access to the full archive.

Continue reading