28ನೇ ವರ್ಷದ ಮಿಯಾಣಿ ಕಾಡಿನ ತಾರು ಸೂರ್ಯ ಕಂಬಳೋತ್ಸವವು ವಿಜೃಂಭಣೆಯಿಂದ ನೆರವೇರಿತು. ಕಂಬಳ ಕೂಟದಲ್ಲಿ ಒಟ್ಟು 52 ಜೊತೆ ಕೋಣಗಳು ಭಾಗವಹಿಸಿದವು.
ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ ಉದ್ಯಮಿ ಉಪ್ಪುಂದ ಗೋಕುಲ ಶೆಟ್ಟಿ ಮಾತನಾಡಿ. ನಾವು ಆಡಿ ಬೆಳೆದ ಪರಿಸರದಲ್ಲೇ ಇಂತಹ ಕಂಬಳಗಳ ಆಯೋಜನೆಯು ಗ್ರಾಮೀಣ ಭಾಗದಲ್ಲಿ ಬಹಳ ಹಬ್ಬದ ವಾತಾವರಣ ಮೂಡಿಸುತ್ತದೆ ಎಂದರು
ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಸಾಕ್ಷರತಾ ಮತ್ತು ಶಿಕ್ಷಣ ಇಲಾಖೆ ಉಡುಪಿ ಜಿಲ್ಲೆ ಇವರ ವತಿಯಿಂದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಗಣೇಶ್ ಪೂಜಾರಿ ಹೊಸಕೋಟೆ ಇವರನ್ನ ಅಭಿನಂದಿಸಲಾಯಿತು.
ಈ ಸಂದರ್ಭ ವೇದಿಕೆಯಲ್ಲಿ ಪೊಲೀಸ್ ಇಲಾಖೆಯ ಅಂತಾರಾಷ್ಟ್ರೀಯ ಅತ್ಲೆಟ್ ಶಂಕರ ಕಾಡಿನತಾರು, ಸೂರ್ಯ ಕಂಬಳಿಸುವುದು ಸಂಚಾಲಕ ಸಂತೋಷ್ ಕಾಡಿನತಾರು, ಪರಮೇಶ್ವರ ಭಟ್ ಬೋಳಂಬಳ್ಳಿ, ರಮೇಶ್ ಪೂಜಾರಿ, ದೈಹಿಕ ಶಿಕ್ಷಕ ವಿಜಯ್ , ಇತರರು ಉಪಸ್ಥಿತರಿದ್ದರು

ಸೂರ್ಯ ಕಂಬಳ ಫಲಿತಾಂಶ
ಹಲಗೆ ವಿಭಾಗ
ಪ್ರಥಮ : ದಿ ಶುಕ್ರ ಪೂಜಾರಿ ಮೊಳೆಬೈಲ್
ಕೋಣ ಓಡಿಸಿದವರು: ರಾಘವೇಂದ್ರ ಪೂಜಾರಿ ಕಾಮನ ಮನೆ
ಹಗ್ಗ ಹಿರಿಯ ವಿಭಾಗ
ಪ್ರಥಮ: ಪನ್ನಗ ಪ್ರಥ್ವಿಶ್ ಹೆಬ್ಬಾರ್ ಭಟ್ಕಳ
ಕೋಣ ಓಡಿಸಿದವರು: ಪ್ರಜ್ವಲ್ ಉಳ್ಳೂರು ಕಂದಾವರ
ದ್ವಿತೀಯ: ದಿ ಶೀನಾ ಪೂಜಾರಿ ಕೋಟ ಪಡುಕರೆ
ಕೋಣ ಓಡಿಸಿದವರು: ಭರತ್ ನಾಯ್ಕ ಮಂದಾರ್ತಿ
ಹಗ್ಗ ಕಿರಿಯ ವಿಭಾಗ
ಪ್ರಥಮ: ನೀಲಕಂಠ ಹುಧಾರ್ ತಗ್ಗರ್ಸೆ
ಕೋಣ ಓಡಿಸಿದವರು: ಹರೀಶ್ ನಾಯ್ಕ ಭಟ್ಕಳ
ದ್ವಿತೀಯ
ಶ್ರೀ ಗುಡೆಮಹಲಿಂಗೇಶ್ವರ ಅನುಗ್ರಹ ಶಂಕರ ದೇವಾಡಿಗ
ಕೋಣ ಓಡಿಸಿದವರು: ಶಂಕರ ದೇವಾಡಿಗ ನಾಗೂರು
ಅತೀ ಕಿರಿಯ ವಿಭಾಗ
ಪ್ರಥಮ: ರಿಶಾನ್ ರಿತಿಕ್ ಪೂಜಾರಿ ಹೊಳೆಕಡಿ ಮನೆ ಏಳಜಿತ್
ಕೋಣ ಓಡಿಸಿದವರು:ಹರೀಶ್ ಕೇರ್ಗಾಲ್
ದ್ವಿತೀಯ: ಶ್ರೀ ದುರ್ಗಾ ಕೂಡ್ಲಿ ಬಾರ್ಕೂರು
ಕೋಣ ಓಡಿಸಿದವರು:ಭರತ್ ಮಂದರ್ತಿ

