ಜೆಸಿ ಸಂಸ್ಥೆಯ ವತಿಯಿಂದ ಸಮಾಜಮುಖಿ ಹಾಗೂ ಸಾಧನ ಕ್ಷೇತ್ರಗಳಲ್ಲಿ ಉತ್ತಮ ಸೇವೆ ಸಲ್ಲಿಸಿದವರಿಗೆ ನೀಡಲಾಗುವ ಪ್ರತಿಷ್ಠಿತ ಸಾಧನಾಶ್ರೀ ಪ್ರಶಸ್ತಿಯು ಮಡಂತ್ಯಾರಿನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜೆಸಿಐ ಬೈಂದೂರು ಸಿಟಿ ಘಟಕದ ನಿಕಟ ಪೂರ್ವ ಅಧ್ಯಕ್ಷರಾದ ರಾಜು ಮೊಗವೀರ ಇವರ ಸಾಮಾಜಿಕ ಸೇವೆ ರಕ್ತದಾನ ಸೇವೆ ಹಾಗೂ ಅವರ ಸಾಧನೆಯನ್ನು ಗುರುತಿಸಿ, ಪ್ರಶಸ್ತಿ ನೀಡಿ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಜೆಸಿಐ ಭಾರತ ವಲಯ 15ರ ವಲಯ್ಯಾಧ್ಯಕ್ಷರಾದ ಜೆ ಎಫ್ ಎಸ್ ಸಂತೋಷ್ ಶೆಟ್ಟಿ ಅವರು ಪ್ರಶಸ್ತಿ ಪ್ರದಾನ ಮಾಡಿ, ವಲಯ ಉಪಾಧ್ಯಕ್ಷರಾದ ಜೆ ಎಫ್ ಎಂ ಪ್ರದೀಪ್ ಶೆಟ್ಟಿ ಇನ್ನಾ, ಪಿ ಆರ್ ಮತ್ತು ಮಾರ್ಕೆಟಿಂಗ್ ವಿಭಾಗದ ನಿರ್ದೇಶಕರಾದ ಜೆಸಿ ಸ್ವರಾಜ್ ಶೆಟ್ಟಿ, ವ್ಯವಹಾರ ವಿಭಾಗದ ನಿರ್ದೇಶಕರಾದ ಜೆಸಿ ವಿಕೇಶ್, ಮಾನ್ಯ ಬೈಂದೂರು ಸಿಟಿ ಜೆಸಿಐ ಅಧ್ಯಕ್ಷರಾದ ಜೆಸಿ ಚೈತ್ರ ಸತೀಶ್ ಸೇರಿದಂತೆ ಪ್ರಮುಖ ಪದಾಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

URL has been copied successfully!

Discover more from BYNDOOR XPRESS

Subscribe now to keep reading and get access to the full archive.

Continue reading