ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಬಳಿಯ ಕನ್ಯಾಡಿಯ ಶ್ರೀ ರಾಮ ಕ್ಷೇತ್ರದ ಪೀಠಾಧಿಪತಿಗಳಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಮಹಾರಾಜರವರು ಉಡುಪಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ಬೈಂದೂರಿನಲ್ಲಿ ತಮ್ಮ ಚಾತುರ್ಮಾಸ್ಯ ವ್ರತವನ್ನು ಇಂದಿನ ಸುಗಳಿಗೆಯಲ್ಲಿ ಆರಂಭ ಮಾಡಿದ್ದಾರೆ.
ಶ್ರೀಗಳ ಚಾತುರ್ಮಾಸ್ಯ ಕಾರ್ಯಕ್ರಮದಲ್ಲಿ ಬೈಂದೂರು ಕ್ಷೇತ್ರದ ಎಲ್ಲ ಗ್ರಾಮಗಳ ಎಲ್ಲ ಸಮುದಾಯಗಳ ಭಕ್ತರು ಒಗ್ಗೂಡಿಸಿ ಅಭೂತ ಪೂರ್ವ ರೀತಿಯಲ್ಲಿ ಸಮಸ್ತ ಹಿಂದೂ ಸಮಾಜದ ಚಾತುರ್ಮಾಸ್ಯ ವ್ರತವಾಗುವಂತೆ ಮಾಡಲು ಪಕ್ಷ ರಾಜಕೀಯ ಭೇದ ಮರೆತು ಎಲ್ಲರೂ ಒಂದಾಗಿ ಶ್ರಮಿಸುತ್ತಿದ್ದಾರೆ.


ಈ ಬಾರಿ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಗೋಳಿಹೊಳೆ ಬಿಳಿ ಶಿಲೆ ಶ್ರೀ ವಿನಾಯಕ ಕ್ಷೇತ್ರದಲ್ಲಿ ತಮ್ಮ ಚಾತುರ್ಮಾಸ್ಯ ವ್ರತವನ್ನು ಆಚರಿಸಲು ಸಂಕಲ್ಪಿಸಿ ತಮ್ಮ ಮುಕ್ತ ಜಾತಿ ಎಲ್ಲೆ ಮೀರಿದ ವಿಶಾಲ ಸನಾತನ ಹಿಂದೂ ದೃಷ್ಟಿಯೊಂದಿಗೆ ಧರ್ಮ ಆಧ್ಯಾತ್ಮಿಕ ಸಾಧನ ನಿರತರಾಗಿರುವ ಪೂಜ್ಯರ ನೇತೃತ್ವದಲ್ಲಿ ಈ ವರ್ಷದ ಚಾತುರ್ಮಾಸ್ಯ ವ್ರತವು 48 ದಿನಗಳ ಕಾಲ ಕ್ಷೇತ್ರದಲ್ಲಿ ಪ್ರತಿದಿನ ಗಣ ಹೋಮ ಪೀಠಾರೋಹಣ ಪಾದುಕೆ ಪೂಜೆ ಹಾಗೆ ವಿಶೇಷ ಧಾರ್ಮಿಕ ಕಾರ್ಯಕ್ರಮ ಸಾಂಸ್ಕೃತಿ ಕಾರ್ಯಕ್ರಮ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ಜರುಗಲಿರುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

URL has been copied successfully!

Discover more from BYNDOOR XPRESS

Subscribe now to keep reading and get access to the full archive.

Continue reading