ಬೈಂದೂರು : ಶ್ರೀ ಸೀತಾರಾಮಚಂದ್ರ ದೇವಸ್ಥಾನದ ಶ್ರೀ ಸೀತಾರಾಮಚಂದ್ರ ಕಲ್ಯಾಣ ಮಂಟಪದಲ್ಲಿ ಶ್ರೀ ರಾಮಕೃತ್ರಿಯ ಸಂಘದ ವತಿಯಿಂದ 19ನೇ ವರ್ಷದ ಶ್ರೀ ಸೀತಾರಾಮಚಂದ್ರ ಕಲ್ಯಾಣೋತ್ಸವ ಶನಿವಾರ ಅದ್ದೂರಿಯಿಂದ ನಡೆಯಿತು.

ಶನಿವಾರ ಬೆಳಿಗ್ಗೆ ದೇವತಾ ಪ್ರಾರ್ಥನೆ, ಕರ್ಮಾರಂಭ ಧ್ವಜಾರೋಹಣ, ಮಧ್ಯಾಹ್ನ 12-25ಕ್ಕೆ ಒದಗುವ ಶುಭ ಲಗ್ನ ಸುಮುಹೂರ್ತದಲ್ಲಿ ಶ್ರೀ ಸೀತಾರಾಮಚಂದ್ರ ಕಲ್ಯಾಣ ಮಂಟಪದಲ್ಲಿ ಶ್ರೀಮದ್ ಸ್ವರ್ಣವಲ್ಲಿ ಮಠಾದೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳ ದಿವ್ಯ ಉಪಸ್ಥಿತಿಯಲ್ಲಿ ವಿದ್ವಾನ್ ವೇ|| ಕಟ್ಟೆ ತಿಮ್ಮಣ್ಣ ಪರಮೇಶ್ವರ ಭಟ್ಟರ ನೇತೃತ್ವದಲ್ಲಿ ಶ್ರೀ ಸೀತಾರಾಮಚಂದ್ರ ಕಲ್ಯಾಣೋತ್ಸವವು ನಡೆಯಿತು.

19ನೇ ವರ್ಷದ ಶ್ರೀ ಸೀತಾರಾಮಚಂದ್ರ ಕಲ್ಯಾಣೋತ್ಸವದ ಸೇವಾಕರ್ತರು ವಸಂತಿ ಮತ್ತು ಕೊತ್ವಾಲ್ ಪದ್ಮನಾಭ ಶೇರುಗಾರ ಮತ್ತು ಮಕ್ಕಳು ಗಂಗೊಳ್ಳಿ ಹಾಗೂ ಉಷಾ ಮತ್ತು ನಾಗೇಶ್ ನಾಯಕ್, ಶ್ರುತಿ ಮತ್ತು ರಘುವೀರ ನಾಯಕ್ ಮತ್ತು ನಾಯಕರಮನೆ ಕುಟುಂಬಸ್ಥರು ಬಿಜೂರು ಇದ್ದರು.
ಮಾಜಿ ಸಚಿವ ಕೃಷ್ಣ ಜೆ ಪಾಲೆಮಾರ್, ಧಾರ್ಮಿಕ ಸಾಮಾಜಿಕ ಸೇವಾಕರ್ತ ಬಿ. ರಾಮಕೃಷ್ಣ ಶೇರುಗಾರ್ ಬಿಜೂರು, ಕೊಲ್ಲೂರು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಬು ಹೆಗ್ಡೆ, ಆಡಳಿತ ಮಂಡಳಿ ಸದಸ್ಯರು, ಹಾಗೂ ಮೊಕ್ತೇಸರರು ಶ್ರೀ ರಾಮಕ್ಷತ್ರಿಯ ಸಂಘ ಬೈಂದೂರು. ಅಧ್ಯಕ್ಷರು ಹಾಗೂ ಸದಸ್ಯರು ಶ್ರೀ ರಾಮಕ್ಷತ್ರಿಯ ಯುವಕ ಸಮಾಜ ಅಧ್ಯಕ್ಷರು ಹಾಗೂ ಸದಸ್ಯರು ಶ್ರೀ ರಾಮಕ್ಷತ್ರಿಯ ಮಾತೃ ಮಂಡಳಿ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.


