ಅಂತರಾಷ್ಟ್ರೀಯ ವಿರೋಧಿ ದಿನಾಚರಣೆ ಅಂಗವಾಗಿ ಮಾದಕ ದ್ರವ್ಯ ವಸ್ತುಗಳ ವಿಧಗಳು ಹಾಗೂ ಮಾದಕ ದ್ರವ್ಯ ನಿರ್ಮೂಲನೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಬಹಳ ಮುಖ್ಯ ಎಂಬ ವಿಷಯದಲ್ಲಿ ಗಂಗೊಳ್ಳಿ ಪೊಲೀಸ್ ಠಾಣೆಯ ಬಸವರಾಜ್ ಪಿಎಂ ಎ ಎಸ್ ಐ ಇವರು ಕೈಗಾರಿಕಾ ತರಬೇತಿ ಸಂಸ್ಥೆ ಐ ಟಿ ಐ ನಾಡದಲ್ಲಿ ಮಾಹಿತಿ ನೀಡಿದರು.
ಬದುಕನ್ನು ದುರ್ಬಲಗೊಳಿಸಿ, ಜೀವನದ ನೆಮ್ಮದಿಯನ್ನು ಕುಸಿದುಕೊಳ್ಳುವ ತಂಬಾಕು ಹಾಗೂ ಇತರ ಮಾದಕ ವಸ್ತುಗಳ ಸೇವನೆಯ ದುಶ್ಚಟ ಹಾಗೂ ಮಾರಾಟದಿಂದ ವಿದ್ಯಾರ್ಥಿ ಸಮುದಾಯ ದೂರವಿರಬೇಕು.
ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆಯ ಮೂಲಕ ತಂಬಾಕು ವ್ಯಸನಿಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಪೊಲೀಸ್ ಇಲಾಖೆಯಿಂದ ನಿರಂತರವಾಗಿ ನಡೆಯುತ್ತಿದೆ. ಮಾದಕ ವಸ್ತುಗಳ ಮಾರಾಟ ಹಾಗೂ ಸೇವನೆಯ ಕುರಿತು ಮಾಹಿತಿಗಳು ಇದ್ದಾಗ ನೇರವಾಗಿ ಆರಕ್ಷಕರು ಅಥವಾ ಠಾಣೆಯನ್ನು ಸಂಪರ್ಕಿಸಿ ಮಾಹಿತಿ ನೀಡುವ ಕೆಲಸ ವಿದ್ಯಾರ್ಥಿಗಳಿಂದ ಆಗಬೇಕು. ಇದರಿಂದಾಗಿ ಎಷ್ಟೋ ಕುಟುಂಬದ ನೆಮ್ಮದಿಯನ್ನು ಕಾಪಾಡಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ನವೀನ್ ಲೋಬೋ, ಸಂಸ್ಥೆ ಸಿಬ್ಬಂದಿಗಳಾದ ದಿನೇಶ್ ಕೆ, ಮೋಹನ ಚಂದ್ರ ಪಿ, ಯೋಗೀಶ್ ಬಂಕೇಶ್ವರ, ವಿನಾಯಕ ಕಾಮತ್, ಶ್ರೀಕಾಂತ್ ನಾಯಕ್ ಮತ್ತು ಕಿಶೋರ್ ಸಸಿಹಿತ್ಲು ಉಪಸ್ಥಿತರಿದ್ದರು


