ಕೊಲ್ಲೂರು ತಾಯಿ ಮೂಕಾಂಬಿಕಾ ಸನ್ನಿಧಿಯಲ್ಲಿ ಇಂದು ದಿನಾಂಕ 21 ಜೂನ್ 2026ನೇ ಆದಿತ್ಯವಾರ ಬೆಂಗಳೂರಿನ ಪದ್ಮಶ್ರೀ ಆರ್ ಎಂ ಬಿ ಟ್ರಸ್ಟ್ ಇವರು ಸೇವಾ ರೂಪದಲ್ಲಿ ಕೊಡ ಮಾಡಿದ ಸುಮಾರು 3 ಕೋಟಿ ರೂಪಾಯಿ ವೆಚ್ಚದ ಬೆಳ್ಳಿ ರಥವನ್ನು ದೇವಸ್ಥಾನಕ್ಕೆ ಸಮರ್ಪಿಸಲಾಯಿತು.

ಕಾರ್ಯಕ್ರಮದಲ್ಲಿ ದೇವಸ್ಥಾನದ ನೌಕರ ವರ್ಗ, ಆಡಳಿತ ಸಮಿತಿ, ಅರ್ಚಕರು ಮತ್ತು ಊರಿನವರು ಸೇರಿದ್ದರು.

