ಮಹಿಳೆಯರ ಸಾಧನೆ ಆಡಿಕೊಳ್ಳುವ ಬದಲು ಪ್ರೋತ್ಸಾಹಿಸಿ : ಡಾ ಸರಸ್ವತಿ ಬಾಲಕೃಷ್ಣ ಗಾಣಿಗ

ಬೈಂದೂರು : ಜೇಸಿಐ ಬೈಂದೂರು ಸಿಟಿ ಘಟಕದ ಮಹಿಳಾ ವಿಭಾಗದ ವತಿಯಿಂದ ಮಹಿಳಾ ದಿನಾಚರಣೆ ಕಾರ್ಯಕ್ರಮ ಬೈಂದೂರು ರೋಟರಿ ಸಮುದಾಯದ ಭವನದಲ್ಲಿ ನಡೆಯಿತು.

ಜೇಸಿಐ ಬೈಂದೂರು ಸಿಟಿ ಘಟಕದ ಮಹಿಳಾ ವಿಭಾಗದ ಸಂಯೋಜಕಿ ಸೂರ್ಯಕಾಂತಿ ನಾಗೇಶ್ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಬೈಂದೂರು ವಿಘ್ನೇಶ್ ಕ್ಲಿನಿಕ್ ನ ವೈದ್ಯೆ ಸರಸ್ವತಿ ಬಾಲಕೃಷ್ಣ ಗಾಣಿಗ ಇವರನ್ನು ಗುರುತಿಸಿ ಸನ್ಮಾನಿಸಲಾಯಿತು. ಬಳಿಕ ಮಾತನಾಡಿ, ಮಹಿಳೆಯರು ಪರಿಶುದ್ಧ ಮನಸ್ಸಿನಿಂದ ಕಾಯಕದಲ್ಲಿ ತೊಡಗಿದಾಗ ಯಶಸ್ಸು ನಮ್ಮನ್ನು ಅರಸಿ ಬರುತ್ತದೆ. ಮಹಿಳೆಯರ ಸಾಧನೆ ಆಡಿಕೊಳ್ಳುವ ಬದಲು ಪ್ರೋತ್ಸಾಹಿಸಿ. ಒಂದು ಹೆಣ್ಣು ಮತ್ತೊಂದು ಹೆಣ್ಣನ್ನು ಗೌರವದಿಂದ ಕಾಣಬೇಕು. ಹೆಣ್ಣನ್ನು ತಾಯಿ, ಭೂಮಿ, ನದಿಗಳೆಂದು ಪೂಜಿಸುವ ದೇಶ ನಮ್ಮದು ಎಂದರು.

ಬೈಂದೂರು ಇನ್ನರ್ ವೀಲ್ ಅಧ್ಯಕ್ಷೆ ಶಾರದಾ ನಾರಾಯಣ, ಬೈಂದೂರು ಅಂಬೇಡ್ಕರ್ ಮಹಿಳಾ ಸಂಘದ ಅಧ್ಯಕ್ಷೆ ವಿನಯಾ, ಜೇಸಿಐ ಬೈಂದೂರು ಸಿಟಿ ಅಧ್ಯಕ್ಷೆ ಚೈತ್ರಾ ಸತೀಶ್, ಕಾರ್ಯದರ್ಶಿ ಪ್ರೇಮಾ ವಿನಾಯಕ ಶೆಟ್ಟಿ ವೇದಿಕೆಯ ಇದ್ದರು.

URL has been copied successfully!

Discover more from BYNDOOR XPRESS

Subscribe now to keep reading and get access to the full archive.

Continue reading