ಬೈಂದೂರು ಬಂಕೇಶ್ವರದ ರವಿಕಲಾ ಜುವೆಲರ್ಸ್ ನಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತುಗಳು ಕಳವು

ಬೈಂದೂರು ಯಡ್ತರೆ ಗ್ರಾಮದ ಬಂಕೇಶ್ವರದ ಕಾರ್ತಿಕ್ ರಮೇಶ್ ರಾಯ್ಕರ್ ಎಂಬವರ ಬಂಕೇಶ್ವರ ರಸ್ತೆಯಲ್ಲಿರುವ ರವಿ ಕಲಾ ಜ್ಯುವೆಲರ್ಸ್ ನಲ್ಲಿ ಮಾರ್ಚ್ 4ರಂದು ಬೆಳಗಿನ ಜಾವ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಅಂಗಡಿಯಲ್ಲಿದ್ದ 12 ಗ್ರಾಂ ತೂಕದ ಚಿನ್ನದ ನೆಕ್ಲೆಸ್, 80 ಗ್ರಾಂ ತೂಕದ ಬೆಳ್ಳಿ ಆಭರಣಗಳು ಬೆಳ್ಳಿಯ ಚೈನ್ ಬೆಳ್ಳಿಯ ಬ್ರಾಸ್ಲೈಟ್, ಬೆಳ್ಳಿಯ ಉಂಗುರ ಮತ್ತು 8000 ನಗದನ್ನು ಕಳುವು ಮಾಡಿಕೊಂಡು ಹೋಗಿದ್ದಾರೆ. ಒಟ್ಟಾರೆ ಸುಮಾರು 1,23,000 ಮೌಲ್ಯದ ವಸ್ತು ಕಳವಾಗಿದೆ ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

URL has been copied successfully!

Discover more from BYNDOOR XPRESS

Subscribe now to keep reading and get access to the full archive.

Continue reading