ಉಡುಪಿ ಜಿಲ್ಲೆಯಲ್ಲಿ 58,676ಮ್ಯೂಟೇಶನ್‌ಗಳು ಸ್ವಯಂಚಾಲಿತ ಅನುಮೋದನೆ : ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ

ಉಡುಪಿ : ಭೂಮಿ ಮ್ಯೂಟೇಷನ್‌ಗಳಿಗೆ ಸಂಬಂಧಿಸಿದಂತೆ ಆಕ್ಷೇಪ ರಹಿತ 7 ದಿನಗಳ (ನೋಂದಾಯಿತ) ಹಾಗೂ 15 ದಿನಗಳ (ನೋಂದಾಯಿತವಲ್ಲದ) ನೋಟಿಸ್ ಅವಧಿ ಹೊಂದಿರುವ ಮ್ಯೂಟೇಶನ್‌ಗಳನ್ನು ನೋಟಿಸ್‌ ಅವಧಿಯು ಮುಕ್ತಾಯವಾದ ಅನಂತರ ತಂತ್ರಾಂಶದ ಮೂಲಕ ಸ್ವಯಂ ಚಾಲಿತವಾಗಿ ಅನುಮೋದನೆಯಾಗುವಂತೆ ಭೂಮಿ ತಂತ್ರಾಂಶದಲ್ಲಿ ಸೂಕ್ತ ಮಾರ್ಪಾಡು ಮಾಡಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈ ಹಿಂದೆ ನೋಟಿಸ್‌ ರಹಿತ ಅಂದರೆ 9 ರೀತಿಯ (ಹಕ್ಕು& ಋಣ, ಭೂ ಪರಿವರ್ತನೆ, ಪೋಡಿ, ಭೂ ಸ್ವಾಧೀನ, ಕೋರ್ಟ್ ಆದೇಶ, ಕೋರ್ಟ್ ತಡೆ/ ಬಿಡುಗಡೆ, ಸರಕಾರಿ ಆದೇಶ, ಸಾಗುವಳಿದಾರರು ಮತ್ತು ಪಹಣಿ ವರ್ಗಾವಣೆ) ಮ್ಯೂಟೇಶನ್‌ಗಳು ಮಾನವ ಹಸ್ತಕ್ಷೇಪವಿಲ್ಲದೇ ಸರ್ವರ್ ಸಹಿ ಮೂಲಕ ಸ್ವಯಂಚಾಲಿತವಾಗಿ ಅನುಮೋದನೆಯಾಗುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ 1.4. 2025 ರಿಂದ ಒಟ್ಟಾರೆ 58,676 ಅರ್ಜಿದಾರರ ಮ್ಯೂಟೇಶನ್‌ಗಳು ತಂತ್ರಾಂಶದಲ್ಲಿ ಸ್ವಯಂಚಾಲಿತವಾಗಿ ಅನುಮೋದನೆಯಾಗಿರುತ್ತವೆ. ಇದರಿಂದಾಗಿ ಸಾರ್ವಜನಿಕರು ತಮ್ಮ ನೋಂದಾಯಿತ ದಸ್ತಾವೇಜುಗಳ (ಕ್ರಯ, ವಿಭಾಗ, ದಾನ) ಮ್ಯೂಟೇಶನ್ ಪ್ರಕ್ರಿಯೆಗಾಗಿ ತಾಲೂಕು ಕಚೇರಿಗಳಿಗೆ ಅನಗತ್ಯವಾಗಿ ಅಲೆದಾಡುವುದನ್ನು ತಪ್ಪಿಸುವಂತಾಗಿದ್ದು ಸಾರ್ವಜನಿಕರು ಸುಲಭಹಾಗೂ ಸುಲಲಿತವಾಗಿ ಅವರ ಜಮೀನಿನ ಮ್ಯೂಟೇಶನ್‌ಗಳನ್ನು ಕ್ಲಪ್ತ ಸಮಯದಲ್ಲಿ ಪಡೆಯಬಹುದಾಗಿರುತ್ತದೆ. ಜಮೀನಿನ ಪಹಣಿಗಳಿಗೆ ಆಧಾರ್ ಜೋಡಣೆ ಮಾಡಲು ಬಾಕಿ ಇರುವ ಸಾರ್ವಜನಿಕರು ಆಧಾರ್ ಜೋಡಣೆ ಮಾಡಿಸಿಕೊಂಡು ಅಕ್ರಮ ಖಾತಾ ಬದಲಾವಣೆಯನ್ನು ತಡೆಗಟ್ಟುವಲ್ಲಿ ಸಹಕರಿಸುವಂತೆ ಜಿಲ್ಲಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

URL has been copied successfully!

Discover more from BYNDOOR XPRESS

Subscribe now to keep reading and get access to the full archive.

Continue reading