ಬೈಂದೂರು: ಯಡ್ತರೆ ಗ್ರಾಮದ ಹೃದಯ ಭಾಗದಲ್ಲಿ ಸುಮಾರು 7 ವರ್ಷದ ಹಿಂದೆ ಶಂಕು ಸ್ಥಾಪನೆಗೊಂಡ ಬಸ್ ಸ್ಟ್ಯಾಂಡ್ ಈಗ ಇನ್ನೂ ಕೆಲವೇ ದಿನಗಳಲ್ಲಿ ಸಾರ್ವಜನಿಕ ಸೇವೆಗೆ ಚಾಲನೆ ದೊರೆಯಲಿದ್ದು ಬೈಂದೂರು ಜನತೆಯಲ್ಲಿ ಸಂತಸ ಮನೆಮಾಡಿದೆ.

ಲೋಕಾರ್ಪಣೆಗೆ ಸಿದ್ಧಗೊಂಡಿರುವ ಈ ಬಸ್ ನಿಲ್ದಾಣ ಮೊದಲು ಮಾಜಿ ಶಾಸಕ ಕೆ ಗೋಪಾಲ ಪೂಜಾರಿಯವರು ಕೆ ಎಸ್ ಆರ್ ಟಿ ಸಿ ನಿಗಮದ ಅಧ್ಯಕ್ಷಾಗಿದ್ದಾಗ ಅವರ ಹಲವು ವರ್ಷಗಳ ಕನಸಿನ ಯೋಜನೆಯಾದ ಸೂಪರ್ ಸ್ಪೆಶಾಲಿಟಿ ನಿಲ್ದಾಣ ಮತ್ತು ಡಿಪೋ ಯೋಜನೆ ರೂಪುಗೊಂಡಿತ್ತು. ನಂತರ ಮಾಜಿ ಶಾಸಕ BM ಸುಕುಮಾರ್ ಶೆಟ್ಟಿ ಅವರು ಸಮ್ಮಿಶ್ರ ಸರ್ಕಾರ ದಲ್ಲಿ ಸಾರಿಗೆ ಸಚಿವ ತಮ್ಮಣ್ಣ ಅವರನ್ನು ಕರೆಯಿಸಿ ಮರು ಶಂಕು ಸ್ಥಾಪನೆ ಮಾಡಲಾಗಿತ್ತು,ಸದ್ಯ ಕಾಮಗಾರಿಗಳು ಪೂರ್ಣಗೊಂಡಿದ್ದು ಪ್ರಸ್ತುತ ಶಾಸಕರಾದ ಗುರುರಾಜ ಗಂಟಿಹೊಳೆ ಅವಧಿಯಲ್ಲಿ ಡಿಸೆಂಬರ್ 27ರಂದು ಲೋಕಾರ್ಪಣೆಗೊಳ್ಳುತ್ತಿದ್ದು ಈ ಬಗ್ಗೆ ಸಕಲ ಸಿದ್ಧತೆ ನಡೆಯುತ್ತಿದೆ


