ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಹೆಸರಿನಲ್ಲಿ ನಕಲಿ ವೆಬ್ಸೈಟ್ ಸೃಷ್ಟಿಸಿ ಭಕ್ತರಿಗೆ ಹಣ ವಂಚಿಸಿದ ಪ್ರಕರಣದಲ್ಲಿ ರಾಜಸ್ಥಾನ ಮೂಲದ ಆರೋಪಿ ಬಂಧನ, ಉಡುಪಿ ಎಸ್ಪಿ ಹರಿರಾಂ ಶಂಕರ್ ಮಾಧ್ಯಮ ಹೇಳಿಕೆ.
ಇತ್ತೀಚೆಗೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯದ ಹೆಸರಿನಲ್ಲಿ ನಕಲಿ ವೆಬ್ಸೈಟ್ ಅನ್ನು ಸೃಷ್ಟಿಸಿ ಭಕ್ತರಿಗೆ ಲಲಿತಾಂಬಿಕಾ ಅತಿಥಿ ಗ್ರಹದ ಕೊಠಡಿಯನ್ನು ಕಾಯ್ದಿರಿಸಿ ವಾಟ್ಸಆಪ್ ತಂತ್ರಾಂಶದಲ್ಲಿ ಫೋನ್ ಪೇ ಕ್ಯೂಆರ್ ಕೋಡ್ ನೀಡಿ ಹಣವನ್ನು ಪಡೆದು ನಕಲಿ ರಶೀದಿಯನ್ನು ನೀಡಿ ಶ್ರೀದೇವಿ ಭಕ್ತರಿಗೆ ವಂಚಿಸಿ ಹಣದೋಚುತ್ತಿದ್ದ ಸಂಬಂಧ ರಾಜಸ್ಥಾನದ ಮೂಲದ ನಾಸಿರ್ ಹುಸೇನ್ ಎಂಬುವನನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ

