ಬೈಂದೂರು ರೋಟರಿ ಭವನದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ

ಬೈಂದೂರು : ಮೊಗವೀರ ಯುವ ಸಂಘಟನೆ ರಿ ಬೈಂದೂರು ಶಿರೂರು ಘಟಕ, ಡಾ.ಜಿ ಶಂಕರ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ, ವಿಶ್ವಕರ್ಮ ಯುವಕ ಸಂಘ ರಿ ಬೈಂದೂರು, ರೋಟರಿ ಕ್ಲಬ್ ಬೈಂದೂರು, ದೇವಾಡಿಗ ಒಕ್ಕೂಟ ರಿ ಬೈಂದೂರು, ರಕ್ತನಿಧಿ ಕೆ.ಎಂ.ಸಿ ಮಣಿಪಾಲ ಜಿಲ್ಲಾಡಳಿತ ಇವರ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಭಾನುವಾರ ಬೈಂದೂರು ರೋಟರಿ ಸಮುದಾಯದ ಭವನದಲ್ಲಿ ನಡೆಯಿತು.

ಮೊಗವೀರ ಯುವ ಸಂಘಟನೆ ಜಿಲ್ಲಾಧ್ಯಕ್ಷ ಜಯಂತ್ ಅಮೀನ್ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ, ದಾನಗಳಲ್ಲಿ ರಕ್ತದಾನ ಬಹಳ ಪ್ರಮುಖವಾಗಿದ್ದು ಆರೋಗ್ಯವಂತ ಪ್ರತಿಯೊಬ್ಬರೂ ರಕ್ತದಾನ ಮಾಡಬೇಕು. ರಕ್ತ ಈಗಾಗಲೇ ಶಿಬಿರಗಳ ಮೂಲಕ ದಾನಿಗಳಿಂದ ಸಂಗ್ರಹಿಸಲಾಗಿದೆ. ಜಿಲ್ಲೆಯಲ್ಲಿ ರಕ್ತದ ಬೇಡಿಕೆ ಅತಿ ಹೆಚ್ಚಿದ್ದು ಈ ಕೊರತೆಯನ್ನು ನಿಗಿಸುವ ಸಲುವಾಗಿ ಅತಿ ಹೆಚ್ಚು ಶಿಬಿರಗಳನ್ನು ಆಯಾ ಭಾಗದಲ್ಲಿ ಸ್ಥಳೀಯ ಸಂಘಟನೆಗಳ ಮೂಲಕ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಮೊಗವೀರ ಯುವ ಸಂಘಟನೆ ರಿ ಬೈಂದೂರು ಶಿರೂರು ಘಟಕ ಅಧ್ಯಕ್ಷ ಸೋಮಶೇಖರ್ ಮೊಗವೀರ ರಕ್ತದಾನ ಶಿಬಿರದ ಅಧ್ಯಕ್ಷತೆ ವಹಿಸಿದ್ದರು.

ರೋಟರಿ ಸಹಾಯಕ ಗವರ್ನರ್ ಐ ನಾರಾಯಣ, ವಿಶ್ವಕರ್ಮ ಯುವಕ ಸಂಘಟನೆ ಬೈಂದೂರು ಅಧ್ಯಕ್ಷ ನಾಗರಾಜ್ ಆಚಾರ್ಯ ಬಂಕೇಶ್ವರ, ದೇವಾಡಿಗ ಒಕ್ಕೂಟ ರಿ ಬೈಂದೂರು ಅಧ್ಯಕ್ಷ ರಾಘವೇಂದ್ರ ದೇವಾಡಿಗ ಕಳವಾಡಿ, ರಕ್ತನಿಧಿ ಕೆ.ಎಂ.ಸಿ ಮಣಿಪಾಲ ವೈದ್ಯೆ ಡಾ ಸ್ನೇಹ ವೇದಿಕೆಯಲ್ಲಿ ಇದ್ದರು.

ಮೊಗವೀರ ಯುವ ಸಂಘಟನೆ ರಿ ಬೈಂದೂರು ಶಿರೂರು ಘಟಕ ಕಾರ್ಯದರ್ಶಿ ಚಂದ್ರಶೇಖರ ಮೊಗವೀರ ಸ್ವಾಗತಿಸಿದರು. ಮೊಗವೀರ ಯುವ ಸಂಘಟನೆಯ ಸ್ಥಾಪಕಾಧ್ಯಕ್ಷ ಪಾoಡುರಂಗ ಮೊಗವೀರ ತಗ್ಗರ್ಸೆ ಕಾರ್ಯಕ್ರಮ ನಿರೂಪಿಸಿ/ ವಂದಿಸಿದರು.

URL has been copied successfully!

Discover more from BYNDOOR XPRESS

Subscribe now to keep reading and get access to the full archive.

Continue reading