ಬೈಂದೂರು: ಕರಾವಳಿಯ ಜಾನಪದ ಕ್ರೀಡೆಯಾದ ಸಾಂಪ್ರದಾಯಿಕ ಕಂಬಳದ 2026-2027ನೇ ಸಾಲಿನ ಅಧಿಕೃತ ವೇಳಾಪಟ್ಟಿಯನ್ನು ಸಾಂಪ್ರದಾಯಿಕ ಮತ್ತು ಜೋಡುಕರೆ ಕಂಬಳ ಸಮಿತಿ (ರಿ), ಬೈಂದೂರು ಪ್ರಕಟಿಸಿದೆ. ನವೆಂಬರ್ 19, 2026ರಂದು ನಾವುಂದದಲ್ಲಿ ನಡೆಯುವ ಕಂಬಳದೊಂದಿಗೆ ಈ ಬಾರಿಯ ಕಂಬಳ ಋತುವಿಗೆ ಅಧಿಕೃತ ಚಾಲನೆ ದೊರೆಯಲಿದ್ದು, ಫೆಬ್ರವರಿ 2027ರವರೆಗೆ ವಿವಿಧೆಡೆ ಕಂಬಳ ಕೂಟಗಳು ನಡೆಯಲಿವೆ
ಕರಾವಳಿಯ ಹೆಮ್ಮೆಯ ಜಾನಪದ ಕ್ರೀಡೆಯಾದ ಸಾಂಪ್ರದಾಯಿಕ ಕಂಬಳದ 2026-2027ನೇ ಸಾಲಿನ ವೇಳಾಪಟ್ಟಿಯನ್ನು ಬೈಂದೂರಿನ ಸಾಂಪ್ರದಾಯಿಕ ಮತ್ತು ಜೋಡುಕರೆ ಕಂಬಳ ಸಮಿತಿ (ರಿ) ಬಿಡುಗಡೆ ಮಾಡಿದೆ.
2026-2027ನೇ ಸಾಲಿನ ಕಂಬಳಗಳ ಸಂಪೂರ್ಣ ವೇಳಾಪಟ್ಟಿ:
| ದಿನಾಂಕ | ವಾರ | ಸ್ಥಳ |
| 19-11-2026 | ಗುರುವಾರ | ನಾವುಂದ (ಮೊದಲ ಕಂಬಳ) |
| 21-11-2026 | ಶನಿವಾರ | ಹಕ್ರೆಮಠ |
| 22-11-2026 | ಆದಿತ್ಯವಾರ | ಕೆರೆಗದ್ದೆ ಉಳ್ಳೂರು 11, ಮಣೂರು |
| 27-11-2026 | ಶುಕ್ರವಾರ | ಬಾರಕೂರು, ಅಲ್ಬಾಡಿ |
| 28-11-2026 | ಶನಿವಾರ | ಕೆರ್ಗಾಲ್, ಹೊಸಮಠ, ತೋನ್ಸೆ |
| 29-11-2026 | ಆದಿತ್ಯವಾರ | ಎಲ್ಲೂರು, ಇಡೂರು ಕುಂಜ್ಞಾಡಿ, ಬನ್ನಾಡಿ |
| 30-11-2026 | ಸೋಮವಾರ | ಕೆಂಚನೂರು |
| 01-12-2026 | ಮಂಗಳವಾರ | ಚೇರ್ಕಾಡಿ |
| 02-12-2026 | ಬುಧವಾರ | ತಲ್ಲೂರು, ಮೂಡ್ಲಕಟ್ಟೆ, ಬಿಲ್ಲಾಡಿ |
| 03-12-2026 | ಗುರುವಾರ | ಗುಲ್ವಾಡಿ |
| 04-12-2026 | ಶುಕ್ರವಾರ | ಕೆರಾಡಿ, ಕಡ್ರಿ |
| 05-12-2026 | ಶನಿವಾರ | ಚೋರಾಡಿ, ಮಂಡಾಡಿ |
| 06-12-2026 | ಆದಿತ್ಯವಾರ | ತಗ್ಗರ್ಸೆ, ಹೊಸೂರು |
| 07-12-2026 | ಸೋಮವಾರ | ಹಂದಾಡಿ |
| 09-12-2026 | ಬುಧವಾರ | ಕುಚ್ಚೂರು |
| 11-12-2026 | ಶುಕ್ರವಾರ | ಅತ್ರಾಡಿ |
| 12-12-2026 | ಶನಿವಾರ | ಹೊರ್ಲಾಳಿ, ಕೊರ್ಗಿ |
| 13-12-2026 | ಆದಿತ್ಯವಾರ | ವಡ್ಡಂಬೆಟ್ಟು, ಹೆರಿಂಜೆ |
| 21-02-2027 | ಆದಿತ್ಯವಾರ | ಬೈಂದೂರು |
ಸೂಚನೆ: ಇನ್ನೂ ಕೆಲವು ಕಂಬಳಗಳು ಮುಂದಿನ ದಿನಗಳಲ್ಲಿ ಈ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲಿವೆ.

