ದೇಶದ ಮಹತ್ವಾಕಾಂಕ್ಷೆಯ ಯೋಜನೆಯಾದ ಬೆಂಗಳೂರು-ಮಡಗಾಂವ್ ವಂದೇ ಭಾರತ್ ರೈಲು ಬೈಂದೂರಿಗೆ ಆಗಮಿಸಿದ್ದು, ಕರಾವಳಿ ಭಾಗದಲ್ಲಿ ಹೊಸ ಅಭಿವೃದ್ಧಿಯ ಸಂಚಲನ ಮೂಡಿಸಿದೆ. ನಿಗದಿತ ಸಮಯಕ್ಕಿಂತ ಸ್ವಲ್ಪ ತಡವಾಗಿ ಆಗಮಿಸಿದರೂ, ನೂರಾರು ಸಾರ್ವಜನಿಕರು ಹಾಗೂ ರೈಲ್ವೆ ಯಾತ್ರಿ ಸಂಘದ ಸದಸ್ಯರು ಹರ್ಷೋದ್ಘಾರಗಳೊಂದಿಗೆ ರೈಲನ್ನು ಬರಮಾಡಿಕೊಂಡರು.

ಈ ಕುರಿತು ಮಾತನಾಡಿದ ಶಿವಮೊಗ್ಗ ಲೋಕಸಭಾ ಸಂಸದ ಬಿ. ವೈ. ರಾಘವೇಂದ್ರ, ಕೊಲ್ಲೂರಿನ ಪ್ರಮುಖ ಯಾತ್ರಾ ಸ್ಥಳವಾಗಿರುವ ಬೈಂದೂರು ರೈಲು ನಿಲ್ದಾಣಕ್ಕೆ ನೂರು ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಇದು ಮುಂಬರುವ ದಿನಗಳಲ್ಲಿ ಬೈಂದೂರಿನ ಚಿತ್ರಣವನ್ನೇ ಬದಲಿಸಲಿದೆ ಎಂದರು. ಬೈಂದೂರು ಶಾಸಕ ಗುರುರಾಜ್ ಗಂಟಿಹೊಳಿ ಮಾತನಾಡಿ, ರೈಲ್ವೆ ಹೋರಾಟ ಸಮಿತಿಯ ಪರಿಶ್ರಮ ಹಾಗೂ ಸಂಸಗರ ಮುತುವರ್ಜಿಯಿಂದ ಈ ಮಹತ್ವದ ಸಾಧನೆ ಸಾಧ್ಯವಾಗಿದ್ದು, ವಂದೇ ಭಾರತ್ ರೈಲು ಆರಂಭದಿಂದ ಕರಾವಳಿಯ ಪ್ರಗತಿಗೆ ಹೊಸ ವೇಗ ಸಿಕ್ಕಿದೆ ಎಂದು ಪ್ರಶಂಸಿಸಿದರು.

URL has been copied successfully!