ಶ್ರೀ ಈಶ್ವರ ಮಾರಿಕಾಂಬ ದೇವಸ್ಥಾನದಲ್ಲಿ ಶ್ರೀಶಾರದೋತ್ಸವ ಸಮಿತಿಯ ಜಂಟಿ ಆಶ್ರಯದಲ್ಲಿ 33ನೇ ಶಾರದೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು.
ಧಾರ್ಮಿಕ ಮತ್ತು ಸಾಂಸ್ಕೃತಿಕ ಸಭಾ ಕಾರ್ಯಕ್ರಮಗಳು ಗ್ರಾಮ ಗ್ರಾಮವನ್ನು ಒಗ್ಗೂಡಿಸುತ್ತದೆ, ಮನುಷ್ಯನ ನಡುವೆ ಸಂಘಟಿತ ಜೀವನವನ್ನು ಬೆಸೆಯುತ್ತದೆ.

ಕ್ರೀಡಾ ಚಟುವಟಿಕೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ನೀಡಿ ಅಭಿನಂದಿಸಲಾಯಿತು, ನಂತರ ಹೊಸ ಪಟ್ಟಣ ಯಕ್ಷಕಳ ಟ್ರಸ್ಟ್ ಹೊನ್ನಾವರ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಿಂದ ವಿಷಯ ಕಲ್ಯಾಣ ಎನ್ನುವ ಅದ್ಭುತ ಯಕ್ಷಗಾನ ಕಾರ್ಯಕ್ರಮ ನೆರವೇರಿತು, ಹಾಗೂ ಸ್ಥಳೀಯ ಪುಟಾಣಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿತು.

ನಗರೋತ್ಸವದಲ್ಲಿ ಶ್ರೀ ಧರ್ಮಸ್ಥಳ ಭಜನಾ ಪರಿಷತ್ ಸಹಯೋಗದಲ್ಲಿನ ವಿವಿಧ ಕುಣಿತ ಭಜನಾ ತಂಡಗಳು,ನಾಸಿಕ್ ಬ್ಯಾಂಡ್, ಚಂಡೆ, ವಿವಿಧ ಟ್ಯಾಬ್ಲೊಗಳೊಂದಿಗೆ ಅದ್ದೂರಿ ಮೆರವಣಿಗೆದೊಂದಿಗೆ ಶಾರದಾಂಬೆಯ ಮೂರ್ತಿಯನ್ನು ಸುಮನಾವತಿ ನದಿಯಲ್ಲಿ ಜಲಸ್ಥಂಬನ ಮಾಡಲಾಯಿತು.

URL has been copied successfully!

Discover more from BYNDOOR XPRESS

Subscribe now to keep reading and get access to the full archive.

Continue reading