ಎರಡು ದಿನಗಳ ಹಿಂದೆ ಕೊಲ್ಲೂರು ದೇವಸ್ಥಾನದಲ್ಲಿ ನಡೆದ 80 ಸಾವಿರ ಹಣ ಕಳ್ಳತನ ಪ್ರಕರಣ ಶೀಘ್ರ ಬೇದಿಸಲು ಆರೋಪಿಗಳ ಬಗ್ಗೆ ಸರಿಯಾದ ಮಾಹಿತಿ ನೀಡಿದ ಕೊಲ್ಲೂರಿನ ರಿಕ್ಷಾ ಚಾಲಕರಾದ ನವೀನ್ ಪೂಜಾರಿ, ದಳಿ ಮತ್ತು ಬೈಂದೂರಿನ ಗಣೇಶ್ ಆಚಾರಿ, ಬಂಕೇಶ್ವರ ಎಂಬುವವರನ್ನು ಕುಂದಾಪುರ ಡಿ ವೈ ಎಸ್ ಪಿ ತಮ್ಮ ಕಚೇರಿಯಲ್ಲಿ ಪ್ರಶಂಸನ ಪತ್ರ ನೀಡಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ನಿರೀಕ್ಷಕರಾದ ಜಯರಾಮ ಗೌಡ , ಸಂತೋಷ್ ಕೈಕಿಣಿ , ಶಿವಕುಮಾರ್ , ಕೊಲ್ಲೂರು ಠಾಣಾ ಉಪನಿರೀಕ್ಷಕ ವಿನಯ ಕೊರ್ಲಹಳ್ಳಿ , ಭೀಮಶಂಕರ್ ಹಾಗೂ ಉಪ ವಿಭಾಗದ ಅಧಿಕಾರಿಗಳು ಹಾಜರಿದ್ದರು

URL has been copied successfully!