ಆಲೂರು ಗ್ರಾಮ ಪಂಚಾಯತ್ ನೂತನ ಕಟ್ಟಡ ಉದ್ಘಾಟನೆ

ಕುಂದಾಪುರ ತಾಲೂಕು ಆಲೂರು ಗ್ರಾಮ ಪಂಚಾಯಿತಿ ನೂತನ ಕಟ್ಟಡ ಮಂಜುನಾಥ್ ಭಂಡಾರಿ ವಿಧಾನ ಪರಿಷತ್ ಸದಸ್ಯರು ಉದ್ಘಾಟಿಸಿ ಗ್ರಾಮಮಟ್ಟದಿಂದ ಆಗುವ ಪರಿವರ್ತನೆ ದೇಶದ ಅಭಿವೃದ್ಧಿಗೆ ಪೂರಕ ಎನ್ನುವ ಹಿನ್ನೆಲೆಯೊಂದಿಗೆ ಸ್ಥಳೀಯ ಆಡಳಿತ ಸಂಸ್ಥೆಗಳು ಉತ್ತಮ ಕಟ್ಟಡದೊಂದಿಗೆ ಉತ್ತಮ ಗುಣಮಟ್ಟದ ಆಡಳಿತ ನೀಡಬೇಕು ಎಂದು ಹೇಳಿದರು.
ಹಾಗೆಯೇ ಹಳ್ಳಿಗಳೇ ಕೂಡಿರುವಂತಹ ಆಲೂರು ಗ್ರಾಮದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡಲು ಹಾಕಿಕೊಂಡಿರುವ ಅಂತ ಯೋಜನೆಗೆ 5 ಲಕ್ಷ ಅನುದಾನ ಕೂಡ ನೀಡುತ್ತೇನೆ ಹಾಗೆಯೇ ಜೊತೆಯಲ್ಲಿ ಯುವಜನ ಕ್ರೀಡಾ ಇಲಾಖೆಯಿಂದ ಸೌಲಭ್ಯಗಳನ್ನು ಒದಗಿಸಿ ಕೊಡಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು

ಗ್ರಾಮ ಪಂಚಾಯಿತಿ ಸದಸ್ಯರು ಗ್ರಾಮದವರ ವಿಶ್ವಾಸವನ್ನು ಪಡೆಯಬೇಕು ರಾಜಕೀಯ ಹೊರತುಪಡಿಸಿ ಗ್ರಾಮದ ಅಭಿವೃದ್ಧಿಗಾಗಿ ಅದರ ಬಗ್ಗೆ ಯೋಚನೆ ಮಾಡಬೇಕು, ಸೇರಿರುವಂತಹ ಜನಸ್ತೋಮ ನೋಡಿ ಇಲ್ಲಿನ ಜನರು ಪಂಚಾಯತ್ ಮೇಲೆ ಇಟ್ಟಿರುವ ಅಭಿಮಾನವನ್ನು ಸಹಿತ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಗುರುರಾಜ್ ಶೆಟ್ಟಿ ಗಂಟಿಹೊಳೆ ವಹಿಸಿದ್ದರು.


ಈ ಸಂದರ್ಭದಲ್ಲಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಳದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಬಾಬು ಶೆಟ್ಟಿ, ಕುಂದಾಪುರ ತಾಲೂಕು ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಮಾಜಿ ಶಾಸಕ ಕೆ ಗೋಪಾಲ ಪೂಜಾರಿ, ಉದ್ಯಮಿ ಕೃಷ್ಣಮೂರ್ತಿ ಮಂಜರು ಮಾರಣಕಟ್ಟೆ,
ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಜೇಶ್ ದೇವಾಡಿಗ, ಉಪಾಧ್ಯಕ್ಷ ಸಿಂಗಾರಿ ಹಾಗೆ ಕಾರ್ಯದರ್ಶಿ ವಾಸು ನಾಯ್ಕ್, ಆಲೂರು ಹರಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಎಚ್ ಮಂಜಯ್ಯ ಶೆಟ್ಟಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಇಂದಿರಾ ಶೆಟ್ಟಿ, ಮತ್ತು ಕಟ್ಟಡ ರಚನಾ ಸಮಿತಿಯ ಅಧ್ಯಕ್ಷ ಸುಬ್ಬಣ್ಣ ಶೆಟ್ಟಿ ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.

URL has been copied successfully!

Discover more from BYNDOOR XPRESS

Subscribe now to keep reading and get access to the full archive.

Continue reading