ಅನಧಿಕೃತ ಪಟಾಕಿ ಸಂಗ್ರಹ ಮಳಿಗೆಗಳಿಗೆ ದಿಡೀರ್ ಪೋಲೀಸ್ ದಾಳಿ

ಉಡುಪಿ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಅಕ್ರಮ ಹಾಗೂ ಅಪಾಯಕಾರಿಯಾಗಿ ಸಂಗ್ರಹಿಸಲಾಗಿದ್ದ ಪಟಾಕಿ ಮಳಿಗೆಗಳಿಗೆ ಪೊಲೀಸರು ಇಂದು ದಾಳಿ ಮಾಡಿ ಅಪಾರ ಪ್ರಮಾಣದ ಪಟಾಕಿಗಳನ್ನು ವಶಪಡಿಸಿಕೊಂಡಿದ್ದಾರೆ..

ಕಾರ್ಕಳ ನಗರ ವ್ಯಾಪ್ತಿಯ ಮಿಯ್ಯಾರು, ಬ್ರಹ್ಮಾವರ ವ್ಯಾಪ್ತಿಯ ಕುಂಜಾಲು, ಕುಂದಾಪುರ ಕೋಟ ಪೋಲಿಸ್ ಠಾಣಾ ವ್ಯಾಪ್ತಿಯ ತೆಕ್ಕಟ್ಟೆ ಎಂಬಲ್ಲಿ ಪೊಲೀಸರು ದಾಳಿ ನಡೆಸಿ ಹೆಚ್ಚಿನ ಪ್ರಮಾಣದಲ್ಲಿ ಪಟಾಕಿಗಳನ್ನು ವಶಪಡಿಸಿಕೊಂಡರು.
ದೀಪಾವಳಿಯ ಹಿನ್ನೆಲೆಯಲ್ಲಿ ಅನಧಿಕೃತವಾಗಿ ಪಟಾಕಿಯನ್ನು ಖರೀದಿ ಮಾಡಿ ಸಂಗ್ರಹ ಮಾಡುತ್ತಿರುವಂತಹ ಮಾಹಿತಿ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.

ಈ ಬಗ್ಗೆ ಈ ಮೂರು ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದು ತನಿಖೆ ಮುಂದುವರೆದಿದೆ

URL has been copied successfully!

Discover more from BYNDOOR XPRESS

Subscribe now to keep reading and get access to the full archive.

Continue reading