ಸಾಂಪ್ರದಾಯಿಕ ಮತ್ತು ಜೋಡುಕೆರೆ ಕಂಬಳ ಸಮಿತಿ(ರಿ) ಬೈಂದೂರು ವ್ಯಾಪ್ತಿಯ ಜಿಲ್ಲಾ ಕಂಬಳ ಸಮಿತಿಯ ವಾರ್ಷಿಕ ವಿಶೇಷ ಸಭೆಯು ತಗ್ಗರ್ಸೆ ಕಂಬಳ ಗದ್ದೆ ಮನೆಯವರಾದ ಟಿ ನಾರಾಯಣ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ನಾಗೂರು ಸಾಗರ ಸಭಾ ಭವನದಲ್ಲಿ ಬುಧವಾರ ನಡೆಯಿತು.
ಸಭೆಯಲ್ಲಿ ಮಾತನಾಡಿದ ರಾಜ್ಯ ಕಂಬಳ ಅಸೋಸಿಯೇಷನ್ ಇದರ ಕೋಶಾಧಿಕಾರಿಯಯಾದ ಮುಚ್ಚೂರು ಕಲ್ಕುಡೆ ಲೋಕೇಶ್ ಶೆಟ್ಟಿ ಮಾತನಾಡಿ ಸಾಂಪ್ರದಾಯಿಕ ಕಂಬಳ ಗದ್ದೆಯ ಮನೆಯವರು ಒಂದು ಸಮಿತಿಯ ನ ರಚಿಸಿಕೊಂಡು ನಂತರ ನೋಂದಾವಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡಿಕೊಂಡಾಗ ಮುಂದಿನ ದಿನಗಳಲ್ಲಿ ಸರ್ಕಾರದ ಅನುದಾನ ಪಡೆದುಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು
ಈ ಸಂದರ್ಭ ಮೈಸೂರು ಕಂಬಳದಲ್ಲಿ ಚಿನ್ನದ ಬಹುಮಾನಗಳನ್ನು ಪಡೆದ ಕೋಣಗಳ ಮಾಲಕರಾದ ಬೈಂದೂರು ಸಸಿಹಿತ್ಲು ವೀರೇಂದ್ರ ಪೂಜಾರಿ ಹಾಗೂ ಓಟಗಾರರಾದ ಭಾಸ್ಕರ್ ದೇವಾಡಿಗ, ಸುಧೀರ್ ದೇವಾಡಿಗ ತೆಕ್ಕಟ್ಟೆ ,ಮಹೇಶ್ ಪೂಜಾರಿ ಹೊಸಕೋಟೆ, ವಿಶ್ವನಾಥ ದೇವಾಡಿಗ, ಸ್ವರೂಪ್ ಕುಮಾರ್ ಮಾಸ್ತಿಕಟ್ಟೆ, ಗಣೇಶ್ ಕಂದಾವರ, ಹಾಗೂ ಕಂಬಳ ಕ್ಷೇತ್ರದ ವಿಶೇಷ ಸೇವೆಯನ್ನು ಗುರುತಿಸಿ ವೆಂಕಟೇಶ್ ಬಡಾಮನೆ ಇವರನ್ನು ಅಭಿನಂದಿಸಲಾಯಿತು. ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಾಂತಾರಾಂ ಶೆಟ್ಟಿ ಬಾರ್ಕೂರು, ಉಡುಪಿ ಜಿಲ್ಲಾ ಸಾಂಪ್ರದಾಯಿಕ ಕಂಬಳ ಸಮಿತಿ ಅಧ್ಯಕ್ಷರಾದ ಸುಧಾಕರ್ ಹೆಗಡೆ ಕಾರ್ಯದರ್ಶಿಯಾದ ಪ್ರತಿರಾಜ್ ಶೆಟ್ಟಿ ಬಿಲ್ಲಾಡಿ ಹಾಗೂ ಸಭೆಯಲ್ಲಿ ಹಾಜರಿದ್ದ ಕಂಬಳ ಮನೆಯ ಪ್ರತಿನಿಧಿಗಳನ್ನು ಹಾಗೂ ಕೋಣಗಳ ಮಾಲಕರನ್ನು ಗೌರವಿಸಲಾಯಿತು

ಸಭೆಯಲ್ಲಿ 2026ನೇ ಸಾಲಿನ ಕಂಬಳ ಋತುವಿನ ದಿನಾಂಕಗಳ ಕುರಿತು ಚರ್ಚೆ ನಡೆಸಿ ತಾತ್ಕಾಲಿಕ ವೇಳಾಪಟ್ಟಿಯ ರೂಪರೇಷೆ ಸಿದ್ಧಪಡಿಸಲಾಯಿತು.
21-11-2026 ಶನಿವಾರ-ಹಕ್ರೆಮಠ*
22-11-2026. ಆದಿತ್ಯವಾರ-ಕೆರೆಗದ್ದೆ ಉಳ್ಳೂರು11
27-11-2026 ಶುಕ್ರವಾರ – ಬಾರಕೂರು
28-11-2026 ಶನಿವಾರ -ಹೊಸಮಠ
29-11-2026 ಆದಿತ್ಯವಾರ – ಎಲ್ಲೂರು,ತೋನ್ಸೆ,ಇಡೂರು ಕುಂಜ್ಞಾಡಿ,ಬನ್ನಾಡಿ
30-11-2026 ಸೋಮವಾರ ಕೆಂಚನೂರು
01-12-2026 ಮಂಗಳವಾರ ಬಿಲ್ಲಾಡಿ
02-12-2026. ಬುಧವಾರ ಮೂಡ್ಲಕಟ್ಟೆ
04-12-2026. ಶುಕ್ರವಾರ – ಕೆರಾಡಿ
05-12-2026 .ಶನಿವಾರ ಚೋರಾಡಿ
06-12-2026. ಆದಿತ್ಯವಾರ- ತಗ್ಗರ್ಸೆ, ಹೊಸೂರು
09-12-2026. ಬುಧವಾರ ಕುಚ್ಚೂರು
10-12-2026. ಗುರುವಾರ
11-12-2026. ಶುಕ್ರವಾರ ಆತ್ರಾಡಿ
12-12-2026. ಶನಿವಾರ ಹೊರ್ಲಾಳಿ
13-12-2026. ಆದಿತ್ಯವಾರ ವಡ್ಡಂಬೆಟ್ಟು,ಮಂಡಾಡಿ,ಹೆರಿಂಜೆ
ಕೆಲವು ಕಂಬಳ ಮನೆಯವರು ಸಂಕ್ರಾಂತಿ ದಿನದಂದು ದಿನ ನಿಗದಿ ಇರುವುದರಿಂದ ಅಂತಿಮ ಅಧಿಕೃತ ಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸುವುದೆಂದು ಸಮಿತಿ ಅಧ್ಯಕ್ಷರಾದ ಮಂಜು ಪೂಜಾರಿಯವರು ತಿಳಿಸಿದರು
ಸಭೆಯಲ್ಲಿ ಬೈಂದೂರು ಶಾಸಕರಾದ ಗುರುರಾಜ ಗಂಟಿಹೊಳೆ, ಕಂಬಳ ಸಮಿತಿ ಗೌರವಾಧ್ಯಕ್ಷರಾದ ದೀಪಕ್ ಶೆಟ್ಟಿ, ಪರಮೇಶ್ವರ ಭಟ್ ಬೋಳಂಬಳ್ಳಿ, ವೆಂಕಟರಮಣ ಗಾಣಿಗ ನಾವುಂದ , ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಷನ್ ಸದಸ್ಯರಾದ ವಿಕ್ರಂ ವೆಂಕಟ ಪೂಜಾರಿ, ಬೈಂದೂರು ಕಂಬಳ ಸಮಿತಿಯ ಕಾರ್ಯದರ್ಶಿ, ಸುಧೀರ್ ದೇವಾಡಿಗ, ಸಾಗರ ಸಭಾಭವನದ ಮಾಲೀಕರಾದ ಶೇಖರ್ ಪೂಜಾರಿ ಸೇರಿದಂತೆ ವಿವಿಧ ಕಂಬಳ ಸಮಿತಿಗಳ ಪ್ರತಿನಿಧಿಗಳು,ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮೊದಲಿಗೆ ಅಶೋಕ್ ಆರ್ಮುಡಿ ಪ್ರಾರ್ಥನೆಗೈದರು, ಶಿವರಾಜ್ ಬೋಳಂಬಳ್ಳಿ ಸ್ವಾಗತ ಕಾರ್ಯಕ್ರಮ ನೆರವೇರಿಸಿದರು, ಅಭಿಜಿತ್ ಪಾಂಡೇಶ್ವರ ಧನ್ಯವಾದ ಗೈದರು, ಕಿಶೋರ್ ಸಸಿಹಿತ್ಲು ಬೈಂದೂರು ಕಾರ್ಯಕ್ರಮ ನಿರೂಪಣೆಯನ್ನು ನೆರವೇರಿಸಿದರು.


